ಜೆಡಿಎಸ್ ಅಂಗಪಕ್ಷವಾಗಿರುವ ಹೊಸ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸುವಾಗಿ ಜೆಡಿಎಸ್ ವರಿಷ್ಠ ದೇವೇಗೌಡರು ಹಾಜರಾಗದ ಹೋಗಿದ್ದೆಲ್ಲಿಗೆ?
ಇದು ಉಭಯ ಪಕ್ಷಗಳ ಕಾರ್ಯಕರ್ತರನ್ನು ಕಾಡುತ್ತಿರುವ ಪ್ರಶ್ನೆ. ಅವರು ದೆಹಲಿಗೆ ಹೋಗಿದ್ದಾರೆ ಎಂದು ಕೆಲ ಟಿವಿ ವಾಹಿನಿಗಳು ಹೇಳಿದರೆ, ಕೆಲ ಪತ್ರಿಕೆಗಳು ತಮಗೆ ತೋಚಿದ್ದನ್ನು ಬರೆದವು.
ಆದರೆ ಅವರ ಹೋಗಿದ್ದು ಮಾತ್ರ ಮಧ್ಯಪ್ರದೇಶದ ರೇವಾ ಎಂಬಲ್ಲಿಗೆ. ಅಲ್ಲಿ ಯೋಜನೆಯೊಂದಕ್ಕಾಗಿ ಸರ್ಕಾರ ರೈತರಿಂದ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದನ್ನು ವಿರೋಧಿಸಿ ರೈತರ ಹೋರಾಟದಲ್ಲಿ ಪಾಲ್ಗೊಳ್ಳಲು ದೇವೇಗೌಡರು ತೆರಳಿದ್ದರು.
ಅಲ್ಲಿ ಅವರ ಪಕ್ಷಕ್ಕೆ ಸೇರಿದ ಇಬ್ಬರು ಸ್ಥಳೀಯ ಸಂಸ್ಥೆಗಳು ಪ್ರತಿನಿಧಿಗಳ ನೇತೃತ್ವದಲ್ಲಿ ರೈತರು ಹೋರಾಟ ನಡೆಸಿದ್ದಾರೆ.
ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕಿಂತ ಭೂ ಒತ್ತುವರಿ ಕುರಿತ ಹೋರಾಟದಲ್ಲಿ ಭಾಗಿಯಾಗುವುದು ಅತ್ಯಂತ ಜರೂರು ಎಂದು ಭಾವಿಸಿ ಗೌಡರು ಸೋಮವಾರ ಬೆಳಗ್ಗೆ ಅಲ್ಲಿಗೆ ತೆರಳಿದ್ದರು.
ತಡ ರಾತ್ರಿ ಗೌಡರು ನಗರಕ್ಕೆ ಮರಳಿದರು. ಆದರೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ದಕ್ಷಿಣದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದನ್ನು ಕಣ್ಣಾರೆ ಕಾಣಲು ಬೆಂಗಳೂರಿಗೆ ಆಗಮಿಸಿದ್ದರು.
|