ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಜನರೇ ಇಲ್ಲದ ಭಣಗುಡುತ್ತಿದ್ದ ವಿಧಾನಸೌಧಕ್ಕೆ ಮತ್ತೆ ಜೀವಕಳೆ ಬಂದಿದೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರಿಂದ ಬಿಜೆಪಿ-ಜೆಡಿಎಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರಿಂದ ರಾಜ್ಯ ಆಡಳಿತದ ಕೇಂದ್ರ ವಿಧಾನಸೌಧ ಮತ್ತೆ ಜನಮುಖಿಯಾಗಿದೆ. ರಾಷ್ಟ್ರಪತಿ ಆಳ್ವಿಕೆಯಲ್ಲಿ ಸೂಟು-ಬೂಟುಧಾರಿಗಳದೇ ಕಾರು-ಬಾರು ನಡೆದಿತ್ತು.
ಸರ್ಕಾರ ಇಲ್ಲದ ಮೆಲೆ ವಿಧಾನಸೌಧದಲ್ಲಿ ನಮಗೆ ಕೆಲಸವಿಲ್ಲ ಎಂದು ಸಾರ್ವಜನಿಕರು ದೂರ ಉಳಿದಿದ್ದರು. ಸೋಮವಾರ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದನಂತರ ವಿಧಾನಸೌಧಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹರಿದುಬರುತ್ತಿದ್ದಾರೆ.
ವಿಧಾನಸೌದದ ಮುರು ಮಹಡಿಗಳಲ್ಲೂ ಬಿಜೆಪಿ ಕಾಯಕರ್ತರು ಮಂಗಳವಾರವೂ ಸಹಾ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.
|