ಜೆಡಿಎಸ್ ನೊಂದಿಗೆ ಬಿಜೆಪಿ ಸಂಘರ್ಷ ತಾರಕ್ಕೇರಿದಾಗ ಮೌನಕ್ಕೆ ಶರಣಾಗಿದ್ದ ಅಂದಿನ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಮತ್ತೊಂದು ನಿರ್ಧಾರಕ್ಕೆ ಬಂದಿದ್ದಾರೆ.
ಅದೇನೆಂದರೆ ಜೆಡಿಎಸ್‌ನೊಂದಿಗಿನ ಬಿಜೆಪಿ ಸಂಬಂಧದ ವಿಚಾರಗಳನ್ನು ಮಾಧ್ಯಮದ ಮುಂದೆ ಚರ್ಚಿಸುವುದಿಲ್ಲ ಎಂಬುದು. ಯಾವುದೇ ಕಾರಣಕ್ಕೂ ಮಿತ್ರ ಪಕ್ಷದೊಂದಿಗಿನ ಸಂಬಂಧದ ವಿಚಾರಗಳನ್ನು ಮಾಧ್ಯಮದೊಂದಿಗೆ ಚರ್ಚಿಸುವುದಿಲ್ಲ. ಈ ಬಗ್ಗೆ ಚರ್ಚೆಗಳೇನಿದ್ದರೂ ನಾಲ್ಕು ಗೋಡೆಯ ನಡುವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರವನ್ನು ಮುನ್ನಡೆಸುವ ವಿಚಾರವು ಸೇರಿದಂತೆ ಭವಿಷ್ಯದಲ್ಲಿ ಆಡಳಿತ ಹೇಗೆ ನಡೆಸಬೇಕು ಎಂಬುದನ್ನು ಚರ್ಚಿಸಲು ಶೀಘ್ರವೇ ಸಮನ್ವಯ ಸಮಿತಿ ಸಭೆ ಆಯೋಜಿಸುವ ಕುರಿತು ಜೆಡಿಎಸ್ ನಾಯಕರೊಂದಿಗೆ ಮಾತನಾಡುವುದಾಗಿ ಅವರು ತಿಳಿಸಿದ್ದಾರೆ.
|