ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಗೌಡರ ಮಾರ್ಗದರ್ಶನದಲ್ಲಿ ಆಡಳಿತ: ಸಿಎಂ
ಶಿವನ ಆದೇಶವಿಲ್ಲದೇ ಹುಲ್ಲು ಕಡ್ಡಿ ಸಹಾ ಅಲ್ಲಾಡುವುದಿಲ್ಲ ಎಂಬಂತೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ಆಜ್ಞೆಯಂತೆ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ಕಾರ ನಡೆಸಲಿದ್ದಾರೆಯೇ? ಇದೀಗ ಇದೊಂದು ಪ್ರಶ್ನೆ ಉದ್ಭವವಾಗಿದೆ.

ಸರ್ಕಾರ ಮನ್ನಡೆಸಲು ದೇವೇಗೌಡರ ಮಾರ್ಗದರ್ಶನ ಪಡೆಯಲು ಯಡಿಯೂರಪ್ಪ ಅವರು ನಿರ್ಧರಿಸಿದ್ದಾರೆ. ಈ ದೇಶದ ಪ್ರಧಾನಿಯಾಗಿ ಅಪಾರ ಅನುಭವ ಪಡೆದಿರುವ ದೇವೇಗೌಡರ ಸಲಹೆಯಂತೆ ಸರ್ಕಾರ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಇತ್ತೀಚಿಗೆ ಭೇಟಿ ಮಾಡಿ ಯಡಿಯೂರಪ್ಪ ಅವರು ದೇವೇಗೌಡರ ಮಾರ್ಗದರ್ಶನ ಕುರಿತ ವಿಷಯವನ್ನು ಪ್ರಸ್ತಾಪಿಸಿದ್ದರು.

ಗೌಡರ ಮಾರ್ಗದರ್ಶನ ಪಡೆದರೆ ಯಡಿಯೂರಪ್ಪ ಹಾಗೂ ನೂತನ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂಬ ಮಾತನ್ನೂ ಸೂಕ್ಷ್ಮವಾಗಿ ಕುಮಾರಸ್ವಾಮಿ ಹೇಳಿದ್ದರು. ಅದನ್ನೇ ಗಂಭಿರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ಕಾರದ ಸುಸೂತ್ರ ಮುನ್ನಡೆಗೆ ಇದೀಗ ಗೌಡರ ಮಾರ್ಗದರ್ಶನ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ಮತ್ತಷ್ಟು
ಮಿತ್ರಪಕ್ಷಗಳ ವಿಚಾರ ಮಾಧ್ಯಮಗಳೊಂದಿಗೆ ಚರ್ಚೆ ಇಲ್ಲ ಸಿಎಂ
ವಿಧಾನಸೌಧಕ್ಕೆ ಜೀವಕಳೆ
ಗೌಡರ ಗೈರು ಉಹೆಗಳು ನೂರಾರು
ಬಿಜೆಪಿ ಮಂತ್ರಿಗಳಿದ್ದಾರೆ, ಖಾತೆ ಹಂಚಿಲ್ಲ
ಅಧಿಕಾರಿಗಳ ವರ್ಗ ; ಜೆಡಿಎಸ್ ಅಪಸ್ವರ
ಜೆಡಿಎಸ್ ಸೇರ್ಪಡೆಯ ನಂತರ ಬಹುಮತ ಸಾಬೀತು