ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ನ.19ರಂದು ವಿಶ್ವಾಸ ಮತ ಕೋರಿಕೆ
NRB
ಬಿಜೆಪಿ ಸರ್ಕಾರವು ವಿಧಾನಸಭೆಯಲ್ಲಿ ನವೆಂಬರ್ 19ರಂದು ವಿಶ್ವಾಸಮತ ಕೋರಿಕೆಗೆ ನಿರ್ಧರಿಸಿದೆ. ಅಧಿಕಾರ ವಹಿಸಿಕೊಂಡ 8 ದಿನಗಳಲ್ಲಿ ಬಹುಮತ ಸಾಬೀತುಮಾಡಬೇಕೆಂದು ರಾಜ್ಯಪಾಲ ರಾಮೇಶ್ವರ್ ಠಾಕೂರ್ ಕಟ್ಟುನಿಟ್ಟಿನ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಅವರ ಆದೇಶಕ್ಕೆ ಕಟ್ಟುಬಿದ್ದು 19ರಂದು ವಿಶ್ವಾಸಮತ ಯಾಚನೆಗೆ ನಿರ್ಧರಿಸಿತು.

ಮಂಗಳವಾರ ಮಧ್ಯಾಹ್ನ ನಡೆದ ತುರ್ತು ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತೆಂದು ಹೇಳಲಾಗಿದೆ. ಸರ್ಕಾರಕ್ಕೆ ಬಹುಮತ ಸಾಬೀತಿಗೆ ಅನುವು ಮಾಡಲು ನ.23ರಂದು ಒಂದು ದಿನದ ವಿಶೇಷ ಅಧಿವೇಶನ ಕರೆಯುವಂತೆ ರಾಜ್ಯಪಾಲರನ್ನು ಕೋರಲು ನಿರ್ಧರಿಸಿರುವುದಾಗಿ ಸೋಮವಾರ ನಡೆದ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಯಡ್ಯೂರಪ್ಪ ತಿಳಿಸಿದ್ದರು.

ಆದರೆ ಅಧಿಕಾರ ವಹಿಸಿಕೊಂಡ 8 ದಿನಗೊಳಗೆ ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲರು ಆದೇಶ ನೀಡಿದ್ದಾರೆಂದು ಮುಖ್ಯಮಂತ್ರಿ ತಿಳಿಸಿದರು. ರಾಜ್ಯಪಾಲರು ಸರ್ಕಾರ ರಚನೆಗೆ ತಮ್ಮನ್ನು ಆಹ್ವಾನಿಸಿದಾಗ 8 ದಿನಗಳಲ್ಲಿ ಬಹುಮತ ಸಾಬೀತು ಮಾಡುವ ಬಗ್ಗೆ ತಮಗೆ ಯಾವ ಸೂಚನೆಯನ್ನೂ ನೀಡಿರಲಿಲ್ಲ ಎಂದು ಯಡ್ಯೂರಪ್ಪ ತಿಳಿಸಿದರು.
ಮತ್ತಷ್ಟು
20ರಂದು ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ
ಗೌಡರ ಮಾರ್ಗದರ್ಶನದಲ್ಲಿ ಆಡಳಿತ: ಸಿಎಂ
ಮಿತ್ರಪಕ್ಷಗಳ ವಿಚಾರ ಮಾಧ್ಯಮಗಳೊಂದಿಗೆ ಚರ್ಚೆ ಇಲ್ಲ ಸಿಎಂ
ವಿಧಾನಸೌಧಕ್ಕೆ ಜೀವಕಳೆ
ಗೌಡರ ಗೈರು ಉಹೆಗಳು ನೂರಾರು
ಬಿಜೆಪಿ ಮಂತ್ರಿಗಳಿದ್ದಾರೆ, ಖಾತೆ ಹಂಚಿಲ್ಲ