ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಯಡಿಯೂರಪ್ಪ ನಿರ್ಧಾರಗಳಿಗೆ ಜೆಡಿಎಸ್ ಕಿಡಿ
ಕೇವಲ ಎರಡು ದಿನಗಳ ಬಿಜೆಪಿ-ಜೆಡಿಎಸ್ ಸರ್ಕಾರ ತೆಗೆದುಕೊಂಡ ಪ್ರಮುಖ ನಿರ್ಧಾರಗಳು ವಿವಾದಕ್ಕೆ ಕಾರಣವಾಗಿವೆ ಹಾಗೂ ಆಂತರಿಕ ಗುದ್ದಾಟಗಳಿಗೆ ನಾಂದಿ ಹಾಡಿದೆ.

ನಿನ್ನೆ ಖಾಸಗಿ ಚಾನೆಲ್ ಒಂದಕ್ಕೆ ಯಡಿಯೂರಪ್ಪನವರು ನೀಡಿದ ಸಂದರ್ಶನದಲ್ಲಿ ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ ಹಾಗೂ ಪ್ರಮುಖ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರಗಳ ಕುರಿತಾಗಿ ಪ್ರಸ್ತಾಪ ಮಾಡಿದ್ದರು

ಇದರ ಬಗ್ಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಈ ರೀತಿ ಹೇಳಿಕೆ ನೀಡುವ ಮುನ್ನ ತಮ್ಮ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತೆಂದು ಹೇಳುವುದರ ಜೊತೆಗೆ ಸರ್ಕಾರದ ಈ ನಿರ್ಧಾರಗಳನ್ನು ರಾಜಭವನಕ್ಕೆ ಕೊಂಡೊಯ್ಯುವುದಾಗಿಯೂ ಸಹ ಎಚ್ಚರಿಕೆ ನೀಡಿದ್ದಾರೆ.

ಕೇವಲ ಒಂದೇ ಪಕ್ಷದ ಸಚಿವರಿರುವ ಸಮ್ಮಿಶ್ರ ಸರ್ಕಾರದ ಸಚಿವರು ನಡೆಸಿದ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳನ್ನು ರದ್ದುಗೊಳಿಸುವಂತೆ ರಾಜ್ಯಪಾಲರನ್ನು ಕೋರಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರ ತನ್ನ ಬಹುಮತವನ್ನು ಸಾಬೀತುಪಡಿಸುವವರೆಗೆ ಅದಕ್ಕೆ ಇಂಥ ಅಧಿಕಾರ ಇರುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ. ಇಂಥ ಪರಿಸ್ಥಿತಿಗಳ ಮುನ್ಸೂಚನೆ ದೊರಕಿದ್ದರಿಂದಲೇ ಬಿಜೆಪಿಗೆ ಜೆಡಿಎಸ್ ವರಿಷ್ಠ ದೇವೇಗೌಡರು 12 ಷರತ್ತುಗಳನ್ನು ವಿಧಿಸಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಮತ್ತಷ್ಟು
ನ.19ರಂದು ವಿಶ್ವಾಸ ಮತ ಕೋರಿಕೆ
20ರಂದು ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ
ಗೌಡರ ಮಾರ್ಗದರ್ಶನದಲ್ಲಿ ಆಡಳಿತ: ಸಿಎಂ
ಮಿತ್ರಪಕ್ಷಗಳ ವಿಚಾರ ಮಾಧ್ಯಮಗಳೊಂದಿಗೆ ಚರ್ಚೆ ಇಲ್ಲ ಸಿಎಂ
ವಿಧಾನಸೌಧಕ್ಕೆ ಜೀವಕಳೆ
ಗೌಡರ ಗೈರು ಉಹೆಗಳು ನೂರಾರು