ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಜೆಡಿಎಸ್ ಮುಖಂಡರಿಗೆ ಸಚಿವ ಆಕಾಂಕ್ಷಿಗಳ ಕಿರಿಕಿರಿ
ಕೆಲ ಶಾಸಕರು ಗುಂಪು ಕಟ್ಟಿಕೊಂಡು ಸಚಿವ ಸ್ಥಾನಕ್ಕೆ ಒತ್ತಡ ಹೇರುತ್ತಿರುವುದು ಜೆಡಿಎಸ್ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವುದು ಬೇಡ ಎಂದು ಜೆಡಿಎಸ್ ಮುಖಂಡರು ನಿರ್ಧರಿಸಿದಾಗ ಪಕ್ಷ ಹೋಳಾಗುವ ಭೀತಿ ಎದುರಾಗಿತ್ತು.

ಈಗ ಶಾಸಕರು ಮಾಧ್ಯಮಗಳ ಮುಂದೆ ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಸಚಿವ ಸ್ಥಾನದಿಂದ ವಂಚಿತರಾಗಿರುವ ಸುಮಾರು 25ಕ್ಕೂ ಹೆಚ್ಚು ಶಾಸಕರೂ ಈ ಬಾರಿ ಹೇಗಾದರೂ ಮಾಡಿ ಸಚಿವರಾಗಲೇ ಬೇಕು ಎಂದು ಪಣ ತೊಟ್ಟಿದ್ದಾರೆ.

ಬಿಜೆಪಿಯನ್ನು ಹೇಗೆ ಹತೋಟಿಯಲ್ಲಿಟ್ಟುಕೊಳ್ಳಬೇಕೆಂಬ ಆಲೋಚನೆಯಲ್ಲಿ ನಿರತರಾಗಿರುವ ಪಕ್ಷದ ನಾಯಕರಿಗೆ ಈ ಶಾಸಕರನ್ನು ಹೇಗೆ ಹದ್ದುಬಸ್ತಿನಲ್ಲಿಡಬೇಕೆಂಬುದು ಅರ್ಥವಾಗಿಲ್ಲ.

ಬುಧವಾರ ನಡೆದ ಶಾಸಕಾಂಗ ಸಭೆಯಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳು ನಾಯಕರಿಗೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ. ಹಾಗೆ ಪಕ್ಷದ ವರಿಷ್ಠರು ಸಹಾ ಶಾಸಕರಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ ಎನ್ನಲಾಗಿದೆ.

ಈಗಾಗಲೇ ಕೆಲ ಶಾಸಕರು ಪುಣೆಯಲ್ಲಿ ಈ ಹಿಂದೆ ಆದ ಒಪ್ಪಂದದಂತೆ ಸಚಿವರಾಗಿದ್ದವರಿಗೆ ಮತ್ತೆ ಸಚಿವ ಸ್ಥಾನ ನೀಡಬಾರದು.
ಹೊಸಬರಿಗೆ ಅವಕಾಶ ನೀಡಬೇಕೆಂದು ಶಾಸಕರ ನಿಯೋಗ ಪಕ್ಷದ ವರಿಷ್ಠ ದೇವೇಗೌಡರಿಗೆ ಮನವಿ ಮಾಡಿದೆ.
ಮತ್ತಷ್ಟು
ಯಡಿಯೂರಪ್ಪ ನಿರ್ಧಾರಗಳಿಗೆ ಜೆಡಿಎಸ್ ಕಿಡಿ
ನ.19ರಂದು ವಿಶ್ವಾಸ ಮತ ಕೋರಿಕೆ
20ರಂದು ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ
ಗೌಡರ ಮಾರ್ಗದರ್ಶನದಲ್ಲಿ ಆಡಳಿತ: ಸಿಎಂ
ಮಿತ್ರಪಕ್ಷಗಳ ವಿಚಾರ ಮಾಧ್ಯಮಗಳೊಂದಿಗೆ ಚರ್ಚೆ ಇಲ್ಲ ಸಿಎಂ
ವಿಧಾನಸೌಧಕ್ಕೆ ಜೀವಕಳೆ