ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸಂಪುಟ ವಿಸ್ತರಣೆ ಬಳಿಕ ನಿಗಮ ಮಂಡಳಿಗಳಿಗೆ ನೇಮಕ
ಬಿಜೆಪಿ ಮತ್ತು ಜೆಡಿ(ಎಸ್) ನಡುವೆ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಾಗೂ ರಾಜ್ಯಪಾಲರ ಅಧಿಸೂಚನೆಯ ಕುರಿತಾಗಿ ಕರೆದಿದ್ದ ಜೆಡಿ(ಎಸ್)ನ ತುರ್ತು ಸಭೆ ಇದೀಗ ಮುಕ್ತಾಯವಾಗಿದೆ.

ತಮ್ಮಿಬ್ಬರ ನಡುವೆ ಅಸಮಾಧಾನ ಇರುವುದು ನಿಜ. ಆದರೆ ಮಾತು ಕತೆಗಳ ಎಲ್ಲವನ್ನೂ ಬಗೆ ಹರಿಸಿಕೊಳ್ಳುವ ವಿಶ್ವಾಸ ತಮಗಿದೆ ಎಂದು ಕುಮಾರಸ್ವಾಮಿಯವರು ಜೆಡಿ(ಎಸ್) ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ತಾವು ಈ ಸಂಜೆ ಯಡಿಯೂರಪ್ಪನವರನ್ನು ಸಹ ಭೇಟಿ ಯಾಗುತ್ತಿರುವುದಾಗಿ ತಿಳಿಸಿದ ಅವರು ನಿಗಮ, ಮಂಡಳಿಗಳ ನೇಮಕಾತಿಯನ್ನು ಸಚಿವ ಸಂಪುಟದ ವಿಸ್ತರಣೆಯ ನಂತರವೇ ಯೋಚಿಸುವುದಾಗಿಯೂ ಸಹ ಹೇಳಿದರು.

ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಹೊಸಬರಿಗೆ ಪ್ರಥಮ ಪ್ರಾಶಸ್ತ್ಯವಿರುತ್ತದೆಂದೂ ಸಹ ತಿಳಿಸಿದ್ದಾರೆ. ತಮ್ಮ ಪಕ್ಷದ ಶಾಸಕರು ಸಚಿವರಾಗಿ ಈ ತಿಂಗಳ 21ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮಾಧ್ಯಮ ವರದಿಗಾರರಿಗೆ ತಿಳಿಸಿದರು.
ಮತ್ತಷ್ಟು
ಜೆಡಿಎಸ್ ಮುಖಂಡರಿಗೆ ಸಚಿವ ಆಕಾಂಕ್ಷಿಗಳ ಕಿರಿಕಿರಿ
ಯಡಿಯೂರಪ್ಪ ನಿರ್ಧಾರಗಳಿಗೆ ಜೆಡಿಎಸ್ ಕಿಡಿ
ನ.19ರಂದು ವಿಶ್ವಾಸ ಮತ ಕೋರಿಕೆ
20ರಂದು ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ
ಗೌಡರ ಮಾರ್ಗದರ್ಶನದಲ್ಲಿ ಆಡಳಿತ: ಸಿಎಂ
ಮಿತ್ರಪಕ್ಷಗಳ ವಿಚಾರ ಮಾಧ್ಯಮಗಳೊಂದಿಗೆ ಚರ್ಚೆ ಇಲ್ಲ ಸಿಎಂ