ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಲಕ್ಷ್ಮಿ ಕುಟುಂಬಕ್ಕೆ 1 ಲಕ್ಷ ರೂ ಸಹಾಯ
ಶಸ್ತ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಚತುರ್ಭುಜ ಲಕ್ಷಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಸ್ಪರ್ಶ್ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಲಕ್ಷ್ಮಿಯ ಯಶಸ್ವೀ ಶಸ್ತ್ತ್ರ ಚಿಕಿತ್ಸೆ ನಡೆಸಿದ ಆಸ್ಪತ್ರೆಯ ಪದಾಧಿಕಾರಿಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಅವರು ಬಡತನದ ರೇಖೆಯಿಂದ ಬಂದ ಲಕ್ಷ್ಮಿಯ ಕುಟುಂಬಕ್ಕೆ ಸಹಾಯ ಧನವಾಗಿ 1 ಲಕ್ಷರೂಗಳನ್ನು ಸರ್ಕಾರದ ವತಿಯಿಂದ ಕೊಡುವುದಾಗಿಯೂ ಸಹ ಘೋಷಿಸಿದರು.

ಯಡಿಯೂರಪ್ಪನವರ ಜೊತೆ ಡಾ|| ವಿ.ಎಸ್. ಆಚಾರ್ಯರವರು ಸಹ ಅಸ್ಪತ್ರೆಗೆ ಭೇಟಿ ನೀಡಿದ್ದರು. 27 ಗಂಟೆಗಳ ಯಶಸ್ವೀ ಶಸ್ತ್ತ್ರ ಚಿಕಿತ್ಸೆಯ ನಂತರ ನೆಮ್ಮದಿಯುಸಿರು ಬಿಟ್ಟ ಲಕ್ಷ್ಮಿಯ ಕುಟುಂಬದವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು.
ಮತ್ತಷ್ಟು
ಸಂಪುಟ ವಿಸ್ತರಣೆ ಬಳಿಕ ನಿಗಮ ಮಂಡಳಿಗಳಿಗೆ ನೇಮಕ
ಜೆಡಿಎಸ್ ಮುಖಂಡರಿಗೆ ಸಚಿವ ಆಕಾಂಕ್ಷಿಗಳ ಕಿರಿಕಿರಿ
ಯಡಿಯೂರಪ್ಪ ನಿರ್ಧಾರಗಳಿಗೆ ಜೆಡಿಎಸ್ ಕಿಡಿ
ನ.19ರಂದು ವಿಶ್ವಾಸ ಮತ ಕೋರಿಕೆ
20ರಂದು ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ
ಗೌಡರ ಮಾರ್ಗದರ್ಶನದಲ್ಲಿ ಆಡಳಿತ: ಸಿಎಂ