ನೆನ್ನೆ ತಾನೇ ತಾವು ಪ್ರಕಟಿಸಿದ ನಿರ್ಧಾರಕ್ಕೆ ವಿರುದ್ಧವಾಗಿ ಕುಮಾರಸ್ವಾಮಿ ಮಾಡಿರುವ ಟೀಕಾ ಪ್ರಹಾರಕ್ಕೆ ತತ್ತರಿಸಿರುವ ಯಡಿಯೂರಪ್ಪನವರು ವಿಶ್ವಾಸ ಮತ ಕೋರುವ ತನಕ ಇನ್ನು ಮುಂದೆ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳದಿರುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು ಇಂದು ಬೆಳಿಗ್ಗೆ ನಗರದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ತಮ್ಮ ಎಂದಿನ ದೇವಸ್ಥಾನ ಯಾತ್ರೆಗಳನ್ನು ಮುಂದುವರಿಸುವುದಾಗಿ ತನ್ಮೂಲಕ ನೆಮ್ಮದಿಯ ಪಥ ತುಳಿಯುವುದಾಗಿ ಹೇಳಿದ್ದಾರೆ.
ತಮ್ಮ ಈ ನಿರ್ಧಾರಕ್ಕೆ ಯಾವುದೇ ರೀತಿಯ ಕಥೆ ಕಟ್ಟುವ ಅಗತ್ಯವಿಲ್ಲ ತಮ್ಮ ಮಿತ್ರ ಪಕ್ಷವಾದ ಜೆಡಿ(ಎಸ್) ಶಾಸಕರಿಗೆ ಯಾವ ರೀತಿಯಲ್ಲೂ ಮುಜುಗುರ ಆಗಬಾರದೆಂಬ ದೃಷ್ಟಿಯಿಂದ ಈ ನಿರ್ಧಾರ ತಳೆಯಲಾಗಿದೆ ಎಂದವರು ತಿಳಿಸಿದರು.
|