ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯಲ್ಲಿ ಜೆಡಿ(ಎಸ್)ನ ಭಿನ್ನಮತೀಯ ನಾಯಕ ಮಹಿಮಾ ಪಟೇಲ್ ಅವರು ಸುವರ್ಣ ಯುಗ ಎಂಬ ಹೊಸ ಪಕ್ಷವನ್ನು ಉದ್ಘಾಟಿಸಿದರು.
ಸಮಾರಂಭದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಪತ್ನಿ ಈ ಹೊಸ ಪಕ್ಷಕ್ಕೆ ಚಾಲನೆ ನೀಡಿದರು.
ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದೆ ತಮ್ಮ ಮಗನ ಗಾದಿಯನ್ನೇ ಭದ್ರ ಮಾಡ ಹೊರಟ ದೇವೇಗೌಡರ ಸ್ವಾರ್ಥತೆಯಿಂದ ಮನನೊಂದು ಮಹಿಮಾ ಪಟೇಲ್ ಪಕ್ಷ ತೊರೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
|