ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗದಂತೆ ತಡೆಯೊಡ್ಡಿದ ಕಾಂಗ್ರೆಸ್ ಹೊಸ ಸರ್ಕಾರ ರಚನೆಯಾದನಂತರವೂ ದಿಡ್ಡಿ ಬಾಗಿಲು ರಾಜಕೀಯವನ್ನು ಮುಂದುವರೆಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ ಅವರು ಆರೋಪಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಯಡಿಯಾರಪ್ಪ ಅವರು ವಿಶ್ವಾಸಮತಯಾಚಿಸುವ ದಿನಾಂಕವನ್ನು ಈ ತಿಂಗಳ 23ರಂದು ನಿಗದಿ ಪಡಿಸಲಾಗಿದ್ದರೂ ಶೀಘ್ರ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲರು ನೀಡಿರುವ ಸೂಚನೆಹಿಂದೆ ಕಾಂಗ್ರೆಸ್ ಪಿತೂರಿ ಎಂದು ಹೇಳಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಕಚೇರಿಯಲ್ಲಿ ಹೋಮ ಮಾಡಿಸಿದ್ದನ್ನು ಸಮರ್ಥಿಸಿಕೊಂಡ ಅವರು ಇದು ಹೋಮ ಹಾಗೂ ಹವನ ಭಾರತೀಯ ಸಂಸ್ಸ್ಕತಿಯ ಭಾಗ, ಅದನ್ನು ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂಸಿಂಗ್ ವಿರೋಧಿಸಿರುವುದು ಸರಿಯಲ್ಲ ಎಂದ ಅವರು ಹೋಮವನ್ನು ಟೀಕಿಸಿದರೆ ಭಾರತೀಯ ಸಂಸ್ಸ್ಕತಿಯನ್ನು ವಿರೋಧಿಸಿದಂತೆ ಎಂದು ಹೇಳಿದರು.
23 ರಂದು ತಮ್ಮ ಪಕ್ಷದ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು, ಅದಕ್ಕೂ ಮುನ್ನ ಜೆಡಿಎಸ್ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ಸಂಪೂರ್ಣ ಸಚಿವ ಸಂಪುಟ ರಚನೆಯಾಗಿ ರಾಜ್ಯದ ಆಡಳಿತ ಸುಸೂತ್ರವಾಗಿ ನಡೆಯಲಿದೆ ಎಂದು ಅವರು ತಿಳಿಸಿದರು.
|