ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಯಡಿಯೂರಪ್ಪ ವೇಗಕ್ಕೆ ಕುಮಾರ್ ಅಂಕುಶ
ರಾಜ್ಯದಲ್ಲಿ ಹೊಸ ಮೈತ್ರಿ ಸರ್ಕಾರ ರಚನೆಯಾದನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವೇಗಕ್ಕೆ ಜೆಡಿಎಸ್ ತಡೆಯೊಡ್ಡಿದೆ.

ಪೂರ್ಣ ಪ್ರಮಾಣದ ಸರ್ಕಾರ ರಚನೆ ಯಾಗುವ ಮುನ್ನವೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಬಗ್ಗೆ ಜೆಡಿಎಸ್ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡುವೆ ನಡೆದ ಮಾತುಕತೆಯಲ್ಲಿ ಸಮ್ಮಿಶ್ರ ಸರ್ಕಾರ ತನ್ನ ಮುಂದಿನ ಅವಧಿಯನ್ನು ಸುಗಮವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಇದರ ಪರಿಣಾಮವಾಗಿ ಶೀಘ್ರವೇ ಹೊಸದಾಗಿ ಲಿಖಿತ ಒಡಂಬಡಿಕೆ ಸಿದ್ಧಗೊಳ್ಳಲಿದೆ.ಇದರಲ್ಲಿ ದೇವೇಗೌಡರು ವಿಧಿಸಿದ್ದ 12 ಷರತ್ತುಗಳಲ್ಲಿ ಬಹುತೇಕ ಷರತ್ತುಗಳು ಅಡಕವಾಗಲಿವೆ.

ಮಂಗಳವಾರ ನಡೆದ ಸಚಿವ ಸಂಪುಟ ನಿರ್ಧಾರಗಳ ಅನುಷ್ಠಾನವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.ಬಿಜೆಪಿಗೆ ಬರಬೇಕಿದ್ದ ವಿಧಾನಸಭೆ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಒಪ್ಪಿಗೆ ಸೂಚಿಸಲಾಗಿದೆ.

ದೋಸ್ತಿ ಪಕ್ಷಗಳ ಮುಖಂಡರನ್ನು ಒಳಗೊಳ್ಳುವ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡಲು ಜೆಡಿಎಸ್ ಸಮ್ಮತಿಸಿದೆ. ಇನ್ನುಮುಂದೆ ವರ್ಗಾವಣೆ ಸೇರಿದಂತೆ ಸರ್ಕಾರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕುಮಾರಸ್ವಾಮಿ ಅವರ ಜತೆ ಸಮಾಲೋಚನೆ ನಡೆಸಲಿದ್ದಾರೆ.

ಲೋಕಸಭೆಗೆ ಮಧ್ಯಂತರ ಚುನಾವಣೆ ನಡೆದರೆ ವಿಧಾನಸಭೆಗೂ ಚುನಾವಣೆ ನಡೆಯಲು ಅನುವಾಗುವಂತೆ ವಿಧಾನಸಭೆಯನ್ನು ವಿಸರ್ಜಿಸಬೇಕು ಎಂಬ ಹಿಂದಿನ ಷರತ್ತನ್ನು ಕೈಬಿಡಲಾಗಿದೆ.

ಸಮನ್ವಯ ಸಮಿತಿಗೆ ಕುಮಾರಸ್ವಾಮಿ ಅವರು ಅಧ್ಯಕ್ಷರಾಗಿರಬೇಕು ಎಂಬ ನಿಯಮವನ್ನು ಕೈಬಿಡಲಾಗಿದೆ.
ಮತ್ತಷ್ಟು
ರಾಜ್ಯಪಾಲರಿಗೆ ಕಾಂಗ್ರೆಸ್ ಒತ್ತಡ: ಡಿವಿಎಸ್ ಆರೋಪ
ಇಂದು ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ
ನ.21ರಂದು ಪ್ರಮಾಣವಚನ:ಕುಮಾರಸ್ವಾಮಿ
ಮಹಿಮಾ ಪಟೇಲರ ಸುವರ್ಣಯುಗ ಆರಂಭ
ಕುಮಾರನ ಮಾತಿಗೆ ಶತ-ಪಥ ತುಳಿದ ಯಡಿಯೂರಪ್ಪ
ಲಕ್ಷ್ಮಿ ಕುಟುಂಬಕ್ಕೆ 1 ಲಕ್ಷ ರೂ ಸಹಾಯ