ಮಾಜಿ ಮುಖ್ಯಮಂತ್ರಿ ಹಿಂದೆ ಸುತ್ತುತ್ತಿರುವ ಚೆಲುವರಾಯಸ್ವಾಮಿ ಅವರಿಗೆ ಸಮಯ ಸರಿಯಲ್ಲ ಎಂದು ಕಾಣುತ್ತಿದೆ. ತಮ್ಮದಲ್ಲದ ಇಲಾಖೆಯ ಆಡಳಿತದಲ್ಲಿ ಮೂಗು ತೋರಿಸಿ ಶಿಕ್ಷಕರನ್ನು ವರ್ಗಾವಣೆ ಮಾಡಿಸಿದ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ಹೈಕೋರ್ಟ್‌ನಲ್ಲಿ ಈಗಾಗಲೇ ಮುಖಭಂಗವಾಗಿದೆ.
ಅದರ ಬೆನ್ನಲ್ಲೇ ಅವರ ವರ್ತನೆ ಬಗ್ಗೆ ಉಪ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ರೇವಣ್ಣ ಕಿಡಿಕಾರುತ್ತಿದ್ದಾರೆ.
ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ರಾಜ್ಯಕ್ಕೆ ಮತ್ತು ಪಕ್ಷಕ್ಕೆ ಒಳ್ಳೆಯದಾಗಬೇಕೆಂದು ಓಡಾಡುತ್ತಿದ್ದರೆ ತಮ್ಮ ವಿರುದ್ಧ ಕೆಂಗಣ್ಣು ಬೀರುವುದು ಸರಿಯಲ್ಲ ಎಂದು ಚೆಲುವರಾಯಸ್ವಾಮಿ ಅವರು ಹೇಳಿದ್ದರು. ಅದಕ್ಕೆ ತ್ರೀವ್ರವಾಗಿ ಪ್ರತಿಕ್ರಿಯಿಸಿದ ರೇವಣ್ಣ ತಮ್ಮ ವಿರುದ್ಧ ಪತ್ರಿಕೆಗಳಲ್ಲಿ ಬರೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ತಮಗೆ ಡಿಸಿಎಂ ಅಥವಾ ಮಂತ್ರಿ ಹುದ್ದೆ ಬೇಕಾಗಿಲ್ಲ ಎಂದು ಮುನಿಸಿಕೊಂಡಿದ್ದಾರೆ. ಸಚಿವ ಸ್ಥಾನಗಳಿಗಾಗಿ ಜೆಡಿಎಸ್ ಕಿತ್ತಾಡುವುದನ್ನು ನೋಡಿ ಬೇಸರಗೊಂಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಪಕ್ಷ ದೌರ್ಬಲ್ಯವನ್ನು ವಿವರಿಸುವ ಬರದಲ್ಲಿ ಬಿಜೆಪಿಯನ್ನು ಶ್ಲಾಘಿಸಿದ್ದಾರೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ವಿಧಾನಸೌಧ ಹಾಗೂ ಇಡೀ ಬೆಂಗಳೂರು ಕೇಸರಿಮಯವಾಗಿದ್ದನ್ನು ಹೇಳಿ ಅವರ ಪಕ್ಷದ ಸಂಘಟನೆ ನೋಡಿ ಜೆಡಿಎಸ್ ಪಕ್ಷ ಪಾಠ ಕಲಿಯಬೇಕಿದೆ.
ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷದವರೂ ಗೆದ್ದು ಬಂದು ಬಹುಮತ ಸರ್ಕಾರ ರಚಿಸಿದಾಗ ಇದೇ ರೀತಿ ಜನಸಾಗರದ ನಡುವೆ ಪ್ರಮಾಣವಚನ ಸೀಕರಿಸಬೇಕಿದೆ ಎಂದು ಹೇಳಿದ್ದಾರೆ. _______________________________________
|