ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಗೋಮಾತೆಗೆ 18ರಂದು ಕೋಟಿ ನೀರಾಜನ
ಕರ್ನಾಟಕದ ಹೊಸನಗರದ ಶ್ರೀರಾಮಚಂದ್ರಾಪುರ ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಜೀ ಅವರ ಗೋಮಾತೆ ಉಳಿಸಿ ಚಳವಳಿ ನ. 18ರಂದು ತೀವ್ರ ಸ್ವರೂಪ ಪಡೆಯಲಿದೆ.

ಅಂದು ಬೆಂಗಳೂರಿನ ಅರಮನೆ ಆವರಣದಲ್ಲಿ ಗೋಮಾತೆಗೆ ಒಂದು ಲಕ್ಷ ಮಹಿಳೆಯರು ಕೋಟಿ ಹಣತೆಯಿಂದ ಆರತಿ ಮಾಡಲಿದ್ದಾರೆ. ಇದರಿಂದಾಗಿ ಅರಮನೆಮೈದಾನ ಸಂಪೂರ್ಣ ದೀಪಮಯವಾಗಲಿದೆ.

ಭಾರತೀಯ ಗೋವುಗಳ ಸಂರಕ್ಷಣೆಗೆ, ಗೋಮಾತೆಯ ಮೇಲೆ ಭಕ್ತಿಭಾವ ಮೂಡಿಸಲು ಮಹಿಳಾ ಮಾಧ್ಯಮದ ಅಗತ್ಯವಿದೆ. ಭೂಮಾತೆ, ಗೋಮಾತೆ, ಮಾತೆ (ಮಹಿಳೆ) ಈ ಮೂರು ಮಾತೆಗಳ ತ್ರಿವೇಣಿ ಸಂಗಮವಾಗಿ ಆ ಸಮಾರಂಭ ಮಾರ್ಪಡಲಿದೆ.

ಬೆಂಗಳೂರು ಸುತ್ತಮುತ್ತ ಲಕ್ಷ ಮಹಿಳೆಯರು ಜಾತಿಮತ ಭೇದವಿಲ್ಲದೆ ಈ ಸಮಾರಂಭದಲ್ಲಿ ಪಾಲ್ಗೊಂಡು ಗೋಮಾತೆಗೆ ಆರತಿ ಮಾಡಲಿದ್ದಾರೆ.

ಅರಮನೆ ಮೈದಾನದಲ್ಲಿ ಮಧ್ಯಾಹ್ನ 2ರಿಂದ ರಾತ್ರಿ 8ರ ವರೆಗೆ ಈ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೇಂದ್ರ ಯೋಜನಾ ರಾಜ್ಯ ಸಚಿವ ಎಂ.ವಿ.ರಾಜಶೇಖರನ್, ಪೇಜಾವರ ವಿಶ್ವೇಶತೀರ್ಥ ಸ್ವಾಮೀಜೀ ಅವರೂ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ.
ಇಡೀ ಕಾರ್ಯಕ್ರಮ ಸಂಗೀತಮಯವಾಗಲಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಂದು ಲಕ್ಷಮಂದಿಗೂ ಹೆಚ್ಚು ಮಹಿಳೆಯರು ತಮ್ಮ ಹೆಸರುಗಳನ್ನು ನೊಂದಾಯಿಸಿದ್ದಾರೆ. ಗೌರಿಬಿದನೂರು, ಸಾಗರ, ಶಿವಮೊಗ್ಗ, ಶಿರಸಿ, ಸಿದ್ದಾಪುರ, ಉಡುಪಿ, ಮಂಗಳೂರು ಮತ್ತಿತರ ಪ್ರದೇಶಗಳಿಂದ ಮಹಿಳೆಯರು ಆಗಮಿಸಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಮತ್ತಷ್ಟು
ಬಹುಮತ ಸಾಬೀತು ಪಡಿಸಲು ವೇದಿಕೆ ಸಜ್ಜು
ಚೆಲುವರಾಯಸ್ವಾಮಿ ಮೇಲೆ ರೇವಣ್ಣ ಕೆಂಗಣ್ಣು
ಯಡಿಯೂರಪ್ಪ ವೇಗಕ್ಕೆ ಕುಮಾರ್ ಅಂಕುಶ
ರಾಜ್ಯಪಾಲರಿಗೆ ಕಾಂಗ್ರೆಸ್ ಒತ್ತಡ: ಡಿವಿಎಸ್ ಆರೋಪ
ಇಂದು ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ
ನ.21ರಂದು ಪ್ರಮಾಣವಚನ:ಕುಮಾರಸ್ವಾಮಿ