ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸರ್ಕಾರದ ಹಾದಿ ಸುಗಮಗೊಳಿಸಲು ಯತ್ನ
ಸರ್ಕಾರದ ಹಾದಿ ಸುಗಮಗೊಳಿಸಲು ದೇವೇಗೌಡರು ಇದೀಗ ಮುಂದಾಗಿದ್ದಾರೆ. ತಾವು ವಿಧಿಸಿದ 12 ಷರತ್ತುಗಳ ಜಾರಿಗೆಯ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆಯನ್ನು ಬಿಜೆಪಿ ರಾಷ್ಟ್ತ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್‌ ಅವರೊಂದಿಗೆ ದೆಹಲಿಯಲ್ಲಿಂದು ಮಹತ್ವದ ಮಾತುಕತೆ ನಡೆಸಿದರೆನ್ನಲಾಗಿದೆ.

ಸುಖ ಸರ್ಕಾರಕ್ಕೆ 12 ಸೂತ್ರಗಳು ತಂದಿಟ್ಟ ಕಿರಿಕಿರಿಯ ಬಗ್ಗೆ ಮುಕ್ತವಾಗಿ ಸಭೆಯಲ್ಲಿ ಚರ್ಚಿಸಲಾಯಿತೆಂದು ಜೆಡಿ(ಎಸ್) ಪಕ್ಷದ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಷರತ್ತುಗಳ ಸಡಿಲಿಕೆ ಅಥವಾ ಕೈ ಬಿಡುವಿಕೆ ಅವರೀರ್ವರಿಗೆ ಸೇರಿದ್ದು ಇದರಲ್ಲಿ ನಮ್ಮ ಪಾತ್ರವೇನು ಇಲ್ಲ, ಚರ್ಚೆಯ ನಂತರದ ಫಲಶೃತಿಗಳನ್ನು ಕಾದು ನೋಡೋಣ ಎಂದಷ್ಟೇ ಹೇಳಿದರು.

ಜೆಡಿ(ಎಸ್) ನಾಯಕರು ಪ್ರತ್ಯೇಕವಾಗಿ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ವಿಶೇಷ ವ್ಯಾಖ್ಯಾನದ ಅವಶ್ಯಕತೆಯೇನು ಇಲ್ಲ,

ಮುಂಬರುವ ಸಚಿವ ಸಂಪುಟ ಹಾಗೂ ನಿಗಮ ಮಂಡಳಿಗಳಲ್ಲಿ ಶೇ. 50ರಷ್ಟು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕೆಂಬುದು ಪಕ್ಷದ ಇಚ್ಛೆಯಾಗಿದೆ ಎಂದೂ ಅವರು ತಿಳಿಸಿದರು.
ಮತ್ತಷ್ಟು
ಕೃಷ್ಣರಾಜಸಾಗರ ಜಲಾಶಯ ಗರಿಷ್ಠ ಮಟ್ಟ
ಗೋಮಾತೆಗೆ 18ರಂದು ಕೋಟಿ ನೀರಾಜನ
ಬಹುಮತ ಸಾಬೀತು ಪಡಿಸಲು ವೇದಿಕೆ ಸಜ್ಜು
ಚೆಲುವರಾಯಸ್ವಾಮಿ ಮೇಲೆ ರೇವಣ್ಣ ಕೆಂಗಣ್ಣು
ಯಡಿಯೂರಪ್ಪ ವೇಗಕ್ಕೆ ಕುಮಾರ್ ಅಂಕುಶ
ರಾಜ್ಯಪಾಲರಿಗೆ ಕಾಂಗ್ರೆಸ್ ಒತ್ತಡ: ಡಿವಿಎಸ್ ಆರೋಪ