ಇತ್ತೀಚೆಗೆ ಬಿಜೆಪಿ ಸಚಿವರು ತಮ್ಮ ಕೊಠಡಿಗಳಲ್ಲಿ ನಡೆಸಿದ ಹೋಮ, ಹವನಗಳ ಬಗ್ಗೆ ಕಟು ಟೀಕೆ ಯಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಸದಾನಂದಗೌಡರು ಕಿಡಿಕಾರಿದ್ದಾರೆ.
ನಾವು ಈ ತಿಂಗಳ 23ರಂದು ಬಹುಮತ ಸಾಬೀತಿಗೆ ನಿರ್ಧರಿಸಿದ್ದೆವು ಆದರೆ ಕಾಂಗ್ರೆಸಿಗರ ಒತ್ತಡ ತಂತ್ರದಿಂದ ರಾಜಪಾಲರು ನಮಗೆ ಈ ಸೂಚನೆ ನೀಡಿದ್ದಾರೆ.
ಯಾವುದೇ ಕಛೇರಿಯಲ್ಲಿ ಹೋಮ, ಹವನ ನಡೆಸುವುದು ಸಂವಿಧಾನಕ್ಕೆ ವಿರೋಧವೇನಲ್ಲ. ಧರ್ಮೋ ರಕ್ಷತಿ ರಕ್ಷಿತಃ ಎನ್ನುತ್ತದೆ ಉಪನಿಷತ್ತು ಮೊದಲು ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.
ಅದು ಬಿಟ್ಟು ಈ ಗೋಸುಂಬೆಗಳ ತೃಪ್ತಿಗಾಗಿ ಸೆಕ್ಯೂಲರಿಸಂ ಹೆಸರಿನಲ್ಲಿ ಅನ್ಯ ಧರ್ಮದ ಆರಾಧನೆ ಮಾಡಬೇಕಿತ್ತೆ? ಇಂತಹವರು ನಮ್ಮ ದೇಶದಲ್ಲಿ ಇರಲೇ ನಾಲಾಯಕ್ಕು ಒಳಗೊಂದು ಹೊರಗೊಂದು ಬಾಯಿಬಿಡುವ ಬದಲು ಜನಪರ ಕಾಳಜಿಯ ಬಗ್ಗೆ ಮಾತಾಡಲಿ ಎಂದು ಕಿವಿ ಮಾತು ಹೇಳಿದರು.
|