ಪ್ಲಾಸ್ಟಿಕ್ ಬಳಕೆ ಮಿತಿಯಲ್ಲಿರಲಿ ಎಂದು ಸಂದೇಶ ಸಾರುವ 2007ನೇ ಸಾಲಿನ ಚಿಣ್ಣರ ಹಬ್ಬಕ್ಕೆ ನಗರದ ಕಂಠೀರವ ಕ್ರೀಡಾಂಗಣದಲ್ಲಿಂದು ಚಾಲನೆ ನೀಡಲಾಯಿತು.
ಇಂದಿನಿಂದ 18ರವರೆಗೆ ನಡೆಯಲಿರುವ ಚಿಣ್ಣರ ಹಬ್ಬದಲ್ಲಿ ಸಾಂಸ್ಕ್ಕತಿಕ ಕಾರ್ಯಕ್ರಮಗಳಿಗೂ ಒತ್ತು ಕೊಡಲಾಗಿದೆ. ಈ ಮೇಳದಲ್ಲಿ ಮಕ್ಕಳು ಇಷ್ಟಪಡುವ ಎಲ್ಲಾ ನಮೂನೆಯ ಆಟದ ಸಾಮಾನುಗಳು, ಬಣ್ಣ ಬಣ್ಣದ ವಸ್ತುಗಳು ದೊರಕಲಿವೆ.
ಈ ಮೇಳದಲ್ಲಿ ಸುಮಾರು 100 ವ್ಯಾಪಾರ ಮಳಿಗೆಗಳಿದ್ದು ನಗರದ ನೂರಕ್ಕೂ ಹೆಚ್ಚು ಶಾಲೆಯ ಮಕ್ಕಳು ಭಾಗವಹಿಸಲಿದ್ದಾರೆ.
ಇಡೀ ಮೇಳವು ಪ್ಲಾಸ್ಟಿಕ್ ರಹಿತವಾಗಿರುವುದು ಇದರ ವಿಶೇಷ. ಹಾವು ಏಣಿ ಆಟದ ಮಾದರಿಯ ಹೀರೋ ಹೊಂಡ ಫೇಸರ್ ಹಂಟ್ ಗೇಮ್ ಷೋ, ಬ್ಲೂ ಬರ್ಡ್ ಚಿತ್ರ ರಚನೆ, ಮಕ್ಕಳಿಗಾಗಿಯೇ ರೂಪಿಸಲ್ಪಟ್ಟ ಹಲವಾರು ಸಾಹಸ ಕ್ರೀಡೆಗಳು, ಫ್ಯಾಷನ್ ಷೋ, ಎಂಎಸ್ಐಲ್ನಿಂದ ಚಿಣ್ಣರ ಹಬ್ಬದ ಆಕರ್ಷಣೆಗಳಾಗಿವೆ.
ನಾಳೆ ಬೆಳಿಗ್ಗೆ 11 ಗಂಟೆಗೆ ಮಕ್ಕಳಿಂದ ಚಿತ್ರ ಬಿಡಿಸುವ ಸ್ಪರ್ಧೆಯಿದ್ದು ಸ್ಪರ್ಧಾಳುಗಳಿಗೆ ಉಚಿತ ಪ್ರವೇಶಾವಕಾಶ ನೀಡಲಾಗಿದೆ. 18ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಫ್ಯಾಷನ್ ಶೋ ನಡೆಯಲಿದೆ.
|