ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಿಜೆಪಿ ಕುಟುವಿಕೆಗೆ ಜೆಡಿಎಸ್ ಚಾಲನೆ
ನಮ್ಮ ಷರತ್ತುಗಳಿಗೆ ಒಪ್ಪದಿದ್ದರೆ ಸರ್ಕಾರಕ್ಕೆ ಬೆಂಬಲವಿಲ್ಲ ಎಂದು ಜೆಡಿಎಸ್ ಮುಖಂಡ ಎಚ್.ಡಿ.ದೇವೇಗೌಡ ಅವರು ಹೊಸ ವರಸೆ ಹಚ್ಚಿಕೊಂಡಿರುವುದು ಅಧಿಕಾರ ಸ್ವೀಕರಿಸಿದ ಮೂರೇ ದಿನದಲ್ಲಿ ಬಿಜೆಪಿ ನೇತೃತ್ವದ ಸರಕಾರಕ್ಕೆ ಎದುರಾದ ಕಿರಿಕಿರಿಯಾಗಿದ್ದು, ಇದು ಮುಂದೆ ಇದೇ ರೀತಿಯ ಹೊಸ ಹೊಸ ವರಸೆಗಳಿಗೆ ಪೀಠಿಕೆಯಾಗಿದೆ.

ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ದೆಹಲಿಯಲ್ಲಿ ದೇವೇಗೌಡ ಈ ಮಾತನ್ನು ಹೇಳಿದ್ದಾರೆ. ಯಡಿಯೂರಪ್ಪ ಅವರು ನ.19ರಂದು ಬಹುಮತ ಸಾಬೀತು ಪಡಿಸುವ ಮುನ್ನವೇ ತಮ್ಮ ಷರತ್ತುಗಳಿಗೆ ಒಪ್ಪಿಗೆ ಸೂಚಿಸಬೇಕು. ಇಲ್ಲವಾದಲ್ಲಿ ಜೆಡಿಎಸ್ ಶಾಸಕರು ಸದನದಲ್ಲಿ ಬಿಜೆಪಿ ಪರ ಮತ ಹಾಕುತ್ತಾರೆ ಎಂದು ನಿರೀಕ್ಷಿಸಬೇಡಿ ಎಂದು ಎಚ್ಚರಿಸಿದ್ದಾರೆ. ಗೌಡರ ಬೆದರಿಕೆ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರಾದ ಎಲ್.ಕೆ.ಅಡ್ವಾಣಿ, ರಾಜನಾಥಸಿಂಗ್ ಮತ್ತಿತರು ಸಭೆ ನಡೆಸಿ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪ್ರಮುಖ ಹುದ್ದೆ ನೀಡಬೇಕು. ಜೆಡಿಎಸ್ ಸೂಚಿಸುವವರನ್ನು ಉಪ ಮುಖ್ಯಮಂತ್ರಿ ಮಾಡಬೇಕು. ಹಿರಿಯ ಅಧಿಕಾರಿಗಳ ಬಡ್ತಿ ಹಾಗೂ ವರ್ಗಾವಣೆ ವಿಚಾರದಲ್ಲಿ ಜೆಡಿಎಸ್ ಜತೆ ಚರ್ಚಿಸಿಯೇ ನಿರ್ಧಾರ ತೆಗೆದುಕೊಳ್ಳಬೇಕು. ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಿ ಸಚಿವರಿಗೆ ಖಾತೆಗಳನ್ನು ಹಂಚಬೇಕು, ಅಲ್ಪ ಸಂಖ್ಯಾತರಿಗೆ ರಕ್ಷಣೆ ನೀಡಬೇಕು ಎಂಬುದು ದೇವೇಗೌಡರ ಷರತ್ತುಗಳಲ್ಲಿ ಒಳಗೊಂಡವು.
ಮತ್ತಷ್ಟು
ಅಂತಿಮ ಗಡುವು: ದೇವೇಗೌಡರ ವರಸೆ
ಚಿಣ್ಣರ ಹಬ್ಬಕ್ಕೆ ಚಾಲನೆ
ಹೋಮ ವಿರೋಧಿಗಳ ನಿರ್ನಾಮ ಮಾಡಲಿ : ಗೌಡ
ಸರ್ಕಾರದ ಹಾದಿ ಸುಗಮಗೊಳಿಸಲು ಯತ್ನ
ಕೃಷ್ಣರಾಜಸಾಗರ ಜಲಾಶಯ ಗರಿಷ್ಠ ಮಟ್ಟ
ಗೋಮಾತೆಗೆ 18ರಂದು ಕೋಟಿ ನೀರಾಜನ