ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸಚಿವ ಪದವಿ ಆಕಾಂಕ್ಷಿಗಳ ಚಟುವಟಿಕೆ ತೀವ್ರ
ಹೊಸ ಮೈತ್ರಿ ಸರ್ಕಾರದ ಸಚಿವ ಸಂಪುಟದ ವಿಸ್ತರಣೆ ದಿನಾಂಕ ಸಮೀಪಿಸುತ್ತಿದ್ದಂತೆ ಸಚಿವ ಪದವಿ ಗಿಟ್ಟಿಸಿಕೊಳ್ಳಲು ಬಿರುಸಿನ ಚಟುವಟಿಕೆ ನಡೆಯುತ್ತಿದೆ.

ಒಟ್ಟು 79 ಶಾಸಕರಿರುವ ಬಿಜೆಪಿಯಲ್ಲಿ ಸಚಿವ ಹುದ್ದೆಗಳ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗಿದೆ. ದೆಹಲಿಗೆ ತೆರಳಿರುವ ಯಡಿಯೂರಪ್ಪ ಅವರು ತಮ್ಮೊಂದಿಗೆ ಸಂಭಾವ್ಯ ಸಚಿವರ ಪಟ್ಟಿಯನ್ನು ಕೊಂಡೊಯ್ದಿದ್ದಾರೆ.

ಇದರ ಕುರಿತು ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಿ ಹೆಸರುಗಳನ್ನು ಅಂತಿಮಗೊಳಿಸಲಿದ್ದಾರೆ. ಈ ಬಾರಿ ಮಹಿಳೆಯರಿಗೆ ಸಚಿವ ಸ್ಥಾನ ನೀಡಬೇಕು ಎಂದು ಜೆಡಿಎಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಲ್ಲೂ ತೀವ್ರ ಒತ್ತಡವಿದೆ.

ಆದರೆ ಒಬ್ಬ ಮಹಿಳೆಯನ್ನು ಮಾತ್ರ ಸಚಿವ ಸ್ಥಾನಕ್ಕೆ ಸೇರಿಸಿಕೊಳ್ಳಬೇಕು ಎಂದು ಎರಡು ಪಕ್ಷಗಳು ತೀರ್ಮಾನಿಸಿವೆ ಎಂದು ಹೇಳಲಾಗಿದೆ.

ಮುಂದಿನ ಕಂತಿನ ಸಚಿವರ ಪ್ರಮಾಣ ವಚನ ಸಮಯದಲ್ಲಿ ತಮಗೆ ಅವಕಾಶ ನೀಡಬೇಕು ಎಂದು ಹಲವಾರು ಬಿಜೆಪಿ ಶಾಸಕರು ರಾಷ್ಟ್ರಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.

ಈಗಾಗಲೇ ಕೆ.ಎಸ್.ಈಶ್ವರಪ್ಪ ಹಾಗೂ ಕಟ್ಟಾ ಸುಬ್ರಹ್ಮಣ್ಯನಾಯ್ಡು ಅವರ ಹೆಸರುಗಳು ಸಂಭಾವ್ಯ ಸಚಿವರ ಪಟ್ಟಿಯಲ್ಲಿವೆ ಎಂದು ಹೇಳಲಾಗಿದೆ. ಸಂಕಷ್ಟದಲ್ಲಿದ್ದಾಗ ತಮಗೆ ನೆರವು ನೀಡಿದ ಅನಂತಕುಮಾರ್ ಅವರ ಬಣಕ್ಕೂ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನ ಮಾನ ದೊರೆಯಲಿದೆ.

ಮತ್ತಷ್ಟು
ಪ್ರಧಾನಿ ಬಳಿ ನೆರವು ಕೋರಿದ ಮುಖ್ಯಮಂತ್ರಿ
ಒಲ್ಲದ ಮದುವೆ: ಜೆಡಿಎಸ್ ಒಂದು ಕಣ್ಣು ಕಾಂಗ್ರೆಸ್‌ನತ್ತ
ಬಿಜೆಪಿ ಕುಟುವಿಕೆಗೆ ಜೆಡಿಎಸ್ ಚಾಲನೆ
ಅಂತಿಮ ಗಡುವು: ದೇವೇಗೌಡರ ವರಸೆ
ಚಿಣ್ಣರ ಹಬ್ಬಕ್ಕೆ ಚಾಲನೆ
ಹೋಮ ವಿರೋಧಿಗಳ ನಿರ್ನಾಮ ಮಾಡಲಿ : ಗೌಡ