ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಡೀವಿಯನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಎಂದ ಧರಂ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಹೋಮ ಹವನ ನಡೆಸಿದ್ದನ್ನು ಟೀಕಿಸಿದವರು ದೇಶದಲ್ಲಿರಲು ನಾಲಾಯಕ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ ನೀಡಿದ ಹೇಳಿಕೆ ಸುತ್ತ ವಿವಾದವೆದ್ದಿದೆ.

ಈ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಧರಂಸಿಂಗ್, ಈ ದೇಶ ಸದಾನಂದಗೌಡರ ಕುಟುಂಬದ್ದಲ್ಲ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು, ತಮ್ಮ ಕುಟುಂಬ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬವಾಗಿದ್ದು, ತಾವು ಎಂಟುಬಾರಿ ವಿಧಾನಸಭೆಗೆ ಆರಿಸಿಬಂದಿರುವುದಾಗಿ ತಿಳಿಸಿದ್ದಾರೆ.

ಸಿದ್ದು ತಿರುಗೇಟು: ಈ ನಡುವೆ, ದೇಶದ ಸಂವಿಧಾನವೇ ಗೊತ್ತಿಲ್ಲದ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡರೇ ದೇಶಬಿಟ್ಟುಹೋಗಬೇಕು ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.

ಹವನ ನಡೆದಿಲ್ಲ: ಇದೆಲ್ಲದರ ನಡುವೆ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಹೋಮ-ಹವನ ನಡೆದಿಲ್ಲ. ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಕೇವಲ ಪೂಜೆ ನಡೆಸಲಾಗಿದೆಯೇ ಹೊರತು ಹೋಮ ಹವನ ನಡೆದಿಲ್ಲ ಎಂದು ಮುಖ್ಯಮಂತ್ರಿಗಳು ಕಚೇರಿ ಪ್ರಕಟಣೆ ತಿಳಿಸಿದೆ.
ಮತ್ತಷ್ಟು
ಸಚಿವ ಪದವಿ ಆಕಾಂಕ್ಷಿಗಳ ಚಟುವಟಿಕೆ ತೀವ್ರ
ಪ್ರಧಾನಿ ಬಳಿ ನೆರವು ಕೋರಿದ ಮುಖ್ಯಮಂತ್ರಿ
ಒಲ್ಲದ ಮದುವೆ: ಜೆಡಿಎಸ್ ಒಂದು ಕಣ್ಣು ಕಾಂಗ್ರೆಸ್‌ನತ್ತ
ಬಿಜೆಪಿ ಕುಟುವಿಕೆಗೆ ಜೆಡಿಎಸ್ ಚಾಲನೆ
ಅಂತಿಮ ಗಡುವು: ದೇವೇಗೌಡರ ವರಸೆ
ಚಿಣ್ಣರ ಹಬ್ಬಕ್ಕೆ ಚಾಲನೆ