ವಿಧಾನ ಸಭಾಧ್ಯಕ್ಷ ಕೃಷ್ಣರವರು ನಾಳೆ ಶಾಸಕರ ಅನರ್ಹತೆ ವಿಚಾರಣೆ ಕೈಗೆತ್ತಿಕೊಳ್ಳಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ 39 ಜಾತ್ಯಾತೀತ ಜನತಾದಳ ಶಾಸಕರ ಅನರ್ಹತೆಯ ಬಗ್ಗೆ ಯಾವುದಾದರೂ ಒಂದು ನಿರ್ಧಾರಕ್ಕೆ ಬರುಬಹುದೆಂಬ ನೀರೀಕ್ಷೆ ಇದೆ.
ವಿಚಾರಣೆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿ(ಎಸ್) ಧುರೀಣ ಎಚ್.ಡಿ.ದೇವೇಗೌಡರಿಗೆ ಹಾಜರಿರಲು ಸಮನ್ಸ್ ನೀಡಿರುವ ಸಭಾಧ್ಯಕ್ಷ ಕೃಷ್ಣರವರು ದೇವೇಗೌಡರ ಹಾಜರಾತಿ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ವಾಟಾಳ್ ನಾಗರಾಜ್ ಮತ್ತಿತರ ಶಾಸಕರ ಅನರ್ಹತೆ ಕೋರಿ ವಿಧಾನಸಭಾಧ್ಯಕ್ಷರಿಗೆ ಈ ಹಿಂದೆ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
|