ವಿವಾದಗಳಿಂದ ರೋಸಿ ಹೋಗಿದ್ದ ಜೆಡಿ(ಎಸ್) ಬಣ ಇದೀಗ ತನ್ನ ಶಕ್ತಿ ಪ್ರದರ್ಶನಕ್ಕೆ ವೇದಿಕೆಯೊಂದನ್ನು ಸಿದ್ಧಪಡಿಸಿಕೊಂಡಿದೆ.
ಇದೇ ತಿಂಗಳ 18ರಂದು ಸರ್ಕಾರಕ್ಕೆ ಜೆಡಿ(ಎಸ್) ಬಣದ ಶಾಸಕರು ಮಂತ್ರಿಗಳಾಗಿ ಸೇರ್ಪಡೆಯಾಗುವ ಸಂದರ್ಭದಲ್ಲಿ ಅಂದು ಸಂಜೆ ಅರಮನೆಯ ಗಾಯತ್ರಿ ವಿಹಾರ ಮೈದಾನದಲ್ಲಿ ಬೃಹತ್ ಸಭೆಯನ್ನು ಆಯೋಜಿಸಿದೆ.
ಆ ದಿನ ಲಕ್ಷಾಂತರ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸುವ ನೀರೀಕ್ಷೆಯಿದೆ. ಈ ಸಭೆಯ ಮೂಲಕ ಪಕ್ಷದ ಜನಪರ ಕಾಳಜಿಯ ಯೋಜನೆಗಳನ್ನು ಜನರಿಗೆ ಮುಟ್ಟಿಸುವುದೇ ಮೂಲ ಉದ್ದೇಶವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಹೇಳಿದ್ದಾರೆ.
ಸಮಾವೇಶಕ್ಕಾಗಿ ನಡೆಯುತ್ತಿರುವ ಸಿದ್ಧತೆಯನ್ನು ಇಂದು ಕುಮಾರಸ್ವಾಮಿ, ರೇವಣ್ಣ ಮತ್ತಿತರರು ವೀಕ್ಷಿಸಿದರು.
|