ಪ್ರಸ್ತುತ ರಾಜಕೀಯ ವಿಚಾರಗಳನ್ನು ವ್ಯಕ್ತಪಡಿಸುವಾಗ ಊಹಾಪೋಹ ಸೃಷ್ಣಿಸುವುದಾಗಲೀ, ಗೊಂದಲ ಸೃಷ್ಟಿಸುವುದಾಗಲೀ ಸಲ್ಲದು ಎಂದು ರಾಜ್ಯಪಾಲ ರಾಮೇಶ್ವರ್ ಠಾಕೂರ್‌ವರು ಮಾಧ್ಯಮ ಮಿತ್ರರಿಗೆ ಕಿವಿ ಮಾತು ಹೇಳಿದರು.
ರಾಷ್ಟ್ತ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ರಾಜ್ಯ ಮಾಧ್ಯಮ ಅಕಾಡಮಿ ಹಮ್ಮಿಕೊಂಡಿದ್ದ ಮಾಧ್ಯಮಗಳಲ್ಲಿನ ಸುದ್ದಿ ಪ್ರಚೋದನಕಾರಿ ಎಂಬ ವಿಷಯದ ಕುರಿತಾಗಿ ಅವರು ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಪತ್ರಿಕೋದ್ಯಮಿಗಳಾದ ಪೂರ್ಣಿಮಾ, ಆರ್.ಪಿ.ಜಗದೀಶ್, ಮಾಧ್ಯಮ ಅಕಾಡಮಿಯ ಅಧ್ಯಕ್ಷ ವಿ.ಎನ್.ಸುಬ್ಬರಾವ್, ಕಾರ್ಯದರ್ಶಿ ಎಚ್. ಬಿ. ದಿನೇಶ್, ಕನ್ನಡ ಪ್ರಭದ ಸುದ್ದಿ ಸಂಪಾದಕ ರವಿ ಹೆಗಡೆ ಮುಂತಾದವರು ಹಾಜರಿದ್ದರು.
|