ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ಮಾದರಿಯಲ್ಲಿ ಓಎಂಆರ್ (ಆಪ್ಟಿಕಲ್ ಮಾರ್ಕ್ ರೀಡರ್) ಶೀಟ್‌ನಲ್ಲಿ ಪರೀಕ್ಷೆ ಫಾರ್ಮ್ ತುಂಬುವ ಪದ್ಧತಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಜಾರಿಗೊಳಿಸಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳುವ ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳಿಗೆ ಉತ್ತರ ಪತ್ರಿಕೆಯಾಗಿ ಓಎಂಆರ್ ಷೀಟ್ ಬಳಸಲಾಗುತ್ತದೆ. ಶೀಟ್ ಮೇಲೆ ಪೆನ್ಸಿಲ್‌ನಿಂದ ಅಂಡ ಅಥವಾ ವೃತ್ತಾಕಾರದಲ್ಲಿ ಗುರುತು ಮಾಡಿದ ಉತ್ತರಗಳನ್ನು ಸ್ಕ್ಯಾನರ್ ಪತ್ತೆ ಹಚ್ಚುತ್ತದೆ.
ಗಂಟೆಗೆ ಸುಮಾರು 2000ರಷ್ಟು ಉತ್ತರ ಪತ್ರಿಕೆಗಳನ್ನು ಓದುವ ಸಾಮರ್ಥ್ಯ ಈ ಸ್ಕ್ಯಾನರ್‌ಗಳಿಗೆ ಇರುತ್ತದೆ.
|