ಬಿಜೆಪಿ ಹಾಗೂ ಜೆಡಿಯಸ್ ನಡುವೆ ಉಂಟಾಗಿರುವ ಮೈತ್ರಿ ಗೊಂದಲದ ನಡುವೆಯೇ ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ವಿಧಾನಸಭೆ ಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ. ಮಿತ್ರಪಕ್ಷ ಜೆಡಿಯಸ್ ಬೆಂಬಲದ ಪೂರ್ಣ ನೀರೀಕ್ಷೆಯಲ್ಲಿರುವ ಅವರು 19 ತಿಂಗಳ ಪೂರ್ಣ ಆಡಳಿತವನ್ನು ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ 12 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಯಡಿಯೂರಪ್ಪ ರಾಜ್ಯಪಾಲ ಠಾಕೂರ್ ಅವರ ನಿರ್ದೇಶನದ ಮೇರೆಗೆ ವಿಶ್ವಾಸಮತ ಯಾಚಿಸಲಿದ್ದಾರೆ. ಅಧಿಕಾರ ಸ್ವೀಕರಿಸಿದ 7 ದಿನಗಳ ಒಳಗಾಗಿ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲರು ಕಳೆದ ವಾರ ಸೂಚಿಸಿದ್ದರು. ಈ ನಡುವೆ ಜೆಡಿಎಸ್ ಎಲ್ಲಾ 18 ಮಂದಿ ಶಾಸಕರು ಒಂದೇ ದಿನ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇನ್ನೊಂದೆಡೆ ಬಿಜೆಪಿಯಿಂದ ಯಡಿಯೂರಪ್ಪ ಸಂಪುಟದಲ್ಲಿ ಈಗಾಗಲೇ ಡಾ|| ವಿ.ಯಸ್.ಆಚಾರ್ಯ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಹಾಗೂ ಆರ್.ಅಶೊಕ್ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಸಚಿವ ಗಾದಿಗೆ ಪೈಪೋಟಿ ನಡೆಯುತ್ತಿದೆ.
|