ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಆರಂಭ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಷರತ್ತುಗಳ ಬಗ್ಗೆ ಬಿಜೆಪಿ ನಿರ್ಲಕ್ಷ್ಯ ತೋರಿಸಿರುವ ಹಿನ್ನೆಲೆಯಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲು ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಇಂದು ಆರಂಭಗೊಂಡಿದೆ.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ನಾಳಿನ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕೆ? ಅಥವಾ ಬೇಡವೇ?ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಈ ಮೊದಲು ನಗರದ ಹೊರವಲಯದ ರೆಸಾರ್ಟ್ ಒಂದರಲ್ಲಿ ಸಭೆ ನಡೆಸಲು ಪಕ್ಷ ಉದ್ದೇಶಿಸಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ತಮ್ಮ ತಂದೆ ದೇವೇಗೌಡರ ಜತೆ ಚರ್ಚಿಸಿದ ನಂತರ ಅವರ ಸಲಹೆಯ ಮೇರೆಗೆ ಸ್ಥಳ ಬದಲಾವಣೆ ನಡೆಸಿ ಪಕ್ಷದ ಕಛೇರಿಯಲ್ಲೇ ನಡೆಸಿದ್ದಾರೆ.
ಮತ್ತಷ್ಟು
ನಾಳೆ ಯಡಿಯೂರಪ್ಪ ವಿಶ್ವಾಸಮತ ಯಾಚನೆ
ಜೆಡಿಎಸ್ ಹೊಸ ಷರತ್ತು: ಸಿನ್ಹಾ ಬೆಂಗಳೂರಿಗೆ
ವೈಷ್ಣೋದೇವಿ ಆಶೀರ್ವಾದ ಕೋರಿದ ಯಡಿಯೂರಪ್ಪ
ಪಿಯುಸಿಗೆ ಸ್ಕ್ಯಾನರ್ ರೀಡರ್ ಮೌಲ್ಯಮಾಪನ
ಸಹಿ ಹಾಕಿದ್ರೆ ಮಾತ್ರ ವಿಶ್ವಾಸ 'ಮತ': ಜೆಡಿಎಸ್
ಷರತ್ತಿಗೆ ಸಹಿ ಬೇಡ: ಮುಖ್ಯಮಂತ್ರಿಗೆ ಬಿಜೆಪಿ ತಾಕೀತು