ತೂಗುಯ್ಯಾಲೆಯಲ್ಲಿರುವ ಸರ್ಕಾರವೆಂಬ ನಾಟಕಕ್ಕೆ ಇಂದು ಸಂಜೆ 6 ಗಂಟೆಗೆ ಅಂತಿಮ ತೆರೆ ಬೀಳಲಿದೆಯೇ ಎಂಬುದು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಯ ವಿಷಯ.
ಈ ನಾಟಕದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಆಡಿಸಿ ನೋಡುವ, ಬೀಳಿಸಿ ನೋಡುವ ತಂತ್ರದ ಮುಂದೆ ಬಿಜೆಪಿ ನೇತೃತ್ವದ ಸರಕಾರ ಉರುಳಿಹೋಗುವುದೇ ಅಥವಾ ಜೆಡಿಎಸ್ ಪಕ್ಷ ಇಬ್ಭಾಗವಾಗಿ ಸರಕಾರ ಉಳಿಯುವುದೇ ಎಂಬುದು ಈ ಬಾರಿಯ ಸಸ್ಪೆನ್ಸ್.
ಅಗ್ನಿಪರೀಕ್ಷೆಯಲ್ಲಿ ನಾವು ಗೆದ್ದು ಬಂದೇ ಬರುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಪುನರುಚ್ಚರಿಸಿದ್ದಾರೆ. ಸ್ವಾರ್ಥ ರಾಜಕಾರಣಕ್ಕಾಗಿ ರಾಜಕೀಯ ಒಪ್ಪಂದವಾಗಿದೆ ಎಂಬ ಉಗ್ರಪ್ಪನವರ ಹೇಳಿಕೆಯನ್ನು ಸಾರಾಸಗಟಾಗಿ ಅಲ್ಲಗಳೆದಿರುವ ಯಡಿಯೂರಪ್ಪನವರು ಜೆಡಿ(ಎಸ್) ಶಾಸಕರ ಪರವಾಗಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
|