ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇದೀಗ ಮುಕ್ತಾಯವಾಗಿದೆ. ಸೆಕ್ಯೂಲರ್ ಆಟಿಟ್ಯೂಡ್ ಅನ್ನು ಸರ್ವನಾಶ ಮಾಡ ಹೊರಟಿರುವ ಸರ್ಕಾರದ ಮೇಲೆ ಹರಿಹಾಯ್ದಿರುವ ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ಈ ಮೈತ್ರಿ ಸರ್ಕಾರವನ್ನು ಮುಂದುವರೆಸುವ ಯೋಚನೆಯೂ ತಮಗಿಲ್ಲ ಎಂದಿದ್ದಾರೆ.
ಯಡಿಯೂರಪ್ಪನವರು ಇದೀಗ ತಾನೇ ವಿಧಾನಸೌದದತ್ತ ತೆರಳುತ್ತಿದ್ದಾರೆ. ವರದಿಯೊಂದರ ಪ್ರಕಾರ ವಿಧಾನಸೌಧ ಇಂದು ಪರಸ್ಪರ ವಾಗ್ದಾಳಿಗಳ ರಣರಂಗವಾಗುವ ಸಾಧ್ಯತೆ ಇದೆ. ಚರ್ಚೆಯಲ್ಲಿ ಕಾವೇರಿಸಲು ಈಗಾಗಲೇ ಕಾಂಗ್ರೆಸ್ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದು ಮೈತ್ರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ತಮ್ಮ ಪಕ್ಷದ ವತಿಯಿಂದ ವಾಗ್ದಾಳಿಯ ನೇತೃತ್ವವನ್ನು ವಹಿಸಲಿದ್ದು ಅದಕ್ಕಾಗಿ 60 ಪುಟಗಳ ಸುಧೀರ್ಘ ಭಾಷಣವನ್ನೇ ಸಿದ್ಧಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದನದಲ್ಲಿ ಬಿಜೆಪಿಯ ಕುತಂತ್ರವನ್ನು ಬಹಿರಂಗಪಡಿಸಲು ಈಗಾಗಲೇ ಕೆಲವಾರು ಕಾಂಗ್ರೆಸ್ ನಾಯಕರು ಸಿದ್ಧರಾಗಿದ್ದಾರೆ ಎಂದು ಸಹ ತಿಳಿದು ಬಂದಿದೆ.
|