ವಿಶ್ವಾಸ ಮತದ ನಂತರ ಯಡಿಯೂರಪ್ಪನವರು ರಾಜೀನಾಮೆ ನೀಡಬಹುದು ಎಂದು ಬಿಜೆಪಿ ರಾಷ್ಟ್ತ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಇದೀಗ ಸೂಚನೆ ನೀಡಿರುವುದು ಸರ್ಕಾರ ಉರುಳುವ ನಿಟ್ಟಿನಲ್ಲಿ ಸಾಗಿದೆ.
ಬಿಜೆಪಿ ಗಣಿಗಾರಿಕೆ, ನಗರಾಭಿವೃದ್ದಿ ಖಾತೆಯನ್ನು ಜೆಡಿ(ಎಸ್)ಗೆ ನೀಡಲು ಸುತಾರಾಂ ಒಪ್ಪದಿರುವುದು ಜೊತೆಗೆ ಮಾಜಿ ಸಚಿವ ಶ್ರೀರಾಮುಲು ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಮುಂದಾಗಿರುವುದರಿಂದ ಜೆಡಿ(ಎಸ್) ಈ ನಿರ್ಣಯಕ್ಕೆ ಬಂದಿದೆ ಎನ್ನಲಾಗಿದೆ.
ಜೆಡಿ(ಎಸ್)ನ ಕೆಲವು ಶಾಸಕರು ಮಧ್ಯಂತರ ಚುನಾವಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಕಾಂಗ್ರೆಸ್ ಬಣವನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ವಕ್ತಾರರು ಸಹ ಈ ಬೆಳವಣಿಗೆಗಳ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿ ರಾಜಕೀಯದಲ್ಲಿ ಅನಿಶ್ಚತೆತೆಯೇ ಬಂಡವಾಳ ಮುಂದೆ ಯಾವ ದಾರಿ ತೆಗೆದುಕೊಳ್ಳಬಹುದು ಎಂಬುದನ್ನು ಈಗಾಗಲೇ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರದ ಅಳಿವು ಉಳಿವಿನ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ವಿಶ್ವಾಸ ಮತಕ್ಕೆ ಮುನ್ನ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ! ಸಂಜೆ 6 ಗಂಟೆ ತನಕ ಕಾದು ನೋಡಿ ಎಂದು ಯಡಿಯೂರಪ್ಪ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇಂದಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಾಂಗ್ರೆಸ್ ಅಭಯ ಹಸ್ತ ಜೆಡಿ(ಎಸ್) ಮೇಲಿದೆ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
|