ಶತಾಯ ಗತಾಯ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ನಡೆಸಿದ ಹರಸಾಹಸ ವ್ಯರ್ಥವಾಗಿದೆ. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಪತನದ ಕ್ಷಣಗಣನೆ ಆರಂಭವಾಗಿದೆ.
ಬಿಜೆಪಿ ಪಕ್ಷದ ವತಿಯಿಂದ ಸಂಧಾನಕಾರರಾಗಿ ತೆರಳಿದ್ದ ದೊರೆರಾಜು ಮತ್ತು ಮುಖ್ಯಮಂತ್ರಿ ಚಂದ್ರುರವರು ದೇವೇಗೌಡರ ಮನ ಒಲಿಸುವಲ್ಲಿ ವಿಫಲರಾಗಿದ್ದಾರೆ.
ಇಂದು ಮಧ್ಯಾಹ್ನ ಪದ್ಮನಾಭನಗರದಲ್ಲಿರುವ ದೇವೇಗೌಡರ ಮನೆಯಲ್ಲಿ ಒಂದು ಸುತ್ತಿನ ಮಾತುಕತೆಯ ಸಂದರ್ಭದಲ್ಲಿ ಈರ್ವರೂ ಬಿಜೆಪಿಯ ವತಿಯಿಂದ ಸಂದೇಶವುಳ್ಳ ಪತ್ರವನ್ನು ತೆಗೆದುಕೊಂಡು ಹೋಗಿದ್ದರು.
ಸಾಕಷ್ಟು ಗೊಂದಲ, ವಿವಾದಗಳ ನಡುವೆಯೂ ಸುಖಾಂತ್ಯದ ನೀರೀಕ್ಷೆಯನ್ನು ಬಿಜೆಪಿ ಹೊಂದಿತ್ತು. ಆದರೆ ಅವರ ನೀರೀಕ್ಷೆಗೆ ವಿರುದ್ಧವಾಗಿ ಜೆಡಿ(ಎಸ್) ವರ್ತನೆಯಿಂದಾಗಿ ಸರ್ಕಾರದ ಮರಣದ ಅವಸಾನದಂಚಿನಲ್ಲಿದೆ.
ದೇವೇಗೌಡರು ಬಿಜೆಪಿಯ ಧೋರಣೆಯನ್ನು ಕಟುವಾಗಿ ಟೀಕಿಸಿ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ತಿಳಿಸಿದ್ದಾರೆ.
|