ನಾವು ಬೆಳ್ಳಗಿರುವುದೆಲ್ಲಾ ಹಾಲೆಂದು ನಂಬಿಕೊಂಡು ಹೋದೆವು. ಅವರ ಉದ್ದೇಶಗಳ ಹಿನ್ನೆಲೆ ಅರ್ಥವಾದ ಮೇಲೆ ಇನ್ನು ಅವರೊಂದಿಗೆ ಯಾವ ರೀತಿಯ ಸಂಬಂಧಗಳನ್ನು ಇಟ್ಟುಕೊಳ್ಳಲು ನಾವು ಸಿದ್ಧರಿಲ್ಲ ಎಂದು ಸ್ಪಷ್ಟೋಕ್ತಿಯಲ್ಲಿ ಬಿಜೆಪಿ ನಾಯಕರಾದ ಸಿ.ಟಿ.ರವಿಯವರು ಹೇಳಿದ್ದಾರೆ.
ದೇವೇಗೌಡರ ಬೇಡಿಕೆಗಳನ್ನು ಕಟುವಾಗಿ ಟೀಕಿಸಿದ ಸಿ.ಟಿ.ರವಿಯವರು ನಮಗೇನು ಅಧಿಕಾರದ ಹಂಬಲವಿರಲಿಲ್ಲ. ಜನತೆ ಬಳಿ ನಾವು ಹೊರಟಿದ್ದೆವು ಅಂತಹವರನ್ನು ನಮ್ಮಿಂದ ತಪ್ಪಾಗಿದೆ ದಯವಿಟ್ಟು ಕ್ಷಮಿಸಿ ಅಂತ ಕರೆದದ್ದು ಯಾರು? ಎಂದು ಕಟುವಾಗಿ ಪ್ರಶ್ನಿಸಿದರು.
ಜೆಡಿ(ಎಸ್)ನ ಹುನ್ನಾರವನ್ನು ಸಧ್ಯದಲ್ಲೇ ಬಯಲಿಗೆಳೆಯುತ್ತೇವೆ. ಅವರು ಬೇಡುತ್ತಿರುವ ಇಲಾಖೆಗಳನ್ನ ನೋಡಿದರೆ ಅವರ ಹಿಂದಿನ ಉದ್ದೇಶಗಳು ಸ್ಪಷ್ಟವಾಗಿ ಗೋಚರವಾಗುತ್ತದೆ. ಬರೀ ದುಡ್ಡು ಮಾಡುವುದೇ ಅವರ ದಂಧೆಯಾದರೆ ಅದಕ್ಕೆ ನಮ್ಮ ಬೆಂಬಲ ಬೇಕಾ? ಅಂತಹ ಷರತ್ತುಗಳಿಗೆ ತಲೆಬಾಗಿ ತತ್ವ ಸಿದ್ದಾಂತ, ಮೌಲ್ಯಗಳಿಗೆ ತಿಲಾಂಜಲಿ ಕೊಡಬೇಕಾ? ಎಂದು ಖಾರವಾಗಿ ಖಾಸಗಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
|