ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ತಪ್ಪಿನ ಅರಿವಾಯಿತು: ಯಡಿಯೂರಪ್ಪ
ವಿಶ್ವಾಸದ್ರೋಹ ಆಗಿದೆ; ಜನತಾ ನ್ಯಾಯಾಲಯಕ್ಕೆ ಹೋಗುವೆ
ಜೆಡಿಎಸ್ ಮುಖಂಡರು ಅದರಲ್ಲೂ ದೇವೇಗೌಡ ಹಾಗೂ ಕುಮಾರಸ್ವಾಮಿ ನಂಬಿಕೆ ದ್ರೋಹ, ವಿಶ್ವಾಸ ದ್ರೋಹ ಮಾಡಿದ್ದಾರೆ. ಈಗ ನಮಗೆ ನಮ್ಮ ತಪ್ಪಿನ ಅರಿವಾಗಿದೆ. ವಿಧಾನ ಸಭೆ ವಿಸರ್ಜಿಸಿ ಜನತಾ ನ್ಯಾಯಾಲಯದ ಮುಂದೆ ಹೋಗುವುದೊಂದೇ ನಮಗುಳಿದಿರುವ ದಾರಿ ಎಂದು ಯಡಿಯೂರಪ್ಪ ನುಡಿದಿದ್ದಾರೆ.

ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಹೊರಗಡೆ ನಯ-ವಿನಯದ ಪ್ರದರ್ಶನ ಮಾಡುತ್ತಿದ್ದ ಕುಮಾರಸ್ವಾಮಿಯವರು ಆಂತರ್ಯದಲ್ಲಿ ಎಂಥ ವಿಷವನ್ನು ತುಂಬಿಕೊಂಡಿದ್ದರು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

21 ತಿಂಗಳ ಹಿಂದೆ ಆದ ಒಡಂಬಡಿಕೆಯಂತೆ ಬೆಂಬಲ ಕೊಡ್ತೇವೆ ಅಂತ ಹೇಳಿದ್ರಿ. ತದನಂತರ ಷರತ್ತು ರಹಿತ ಬೆಂಬಲ ಕೊಡ್ತೇವೆ ಅಂತಲೂ ಹೇಳಿದ್ರಿ. ಅದರೆ ಈಗ ಮತ್ತೆ ಒತ್ತಡ ತಂದು ಸರ್ಕಾರ ಬೀಳುವುದಕ್ಕೆ ಕಾರಣವಾಗಿರುವುದಲ್ಲದೆ ಜನತೆಗೆ ನಂಬಿಕೆ ದ್ರೋಹ ಮಾಡಿದ್ದೀರಿ. ನೀವು ಮಾಡಿದ ದ್ರೋಹ ಮಾಧ್ಯಮಗಳ ಮೂಲಕ ಇಡೀ ವಿಶ್ವಕ್ಕೇ ಗೊತ್ತಾಗಿದೆ ಎಂದು ಯಡಿಯೂರಪ್ಪ ದೇವೇಗೌಡ ಹಾಗೂ ಕುಮಾರಸ್ವಾಮಿಯವರನ್ನುದ್ದೇಶಿಸಿ ಮಾಧ್ಯಮದವರ ಮುಂದೆ ತಮ್ಮ ಅಸಮಾಧಾನವನ್ನು ತೋಡಿಕೊಂಡರು.
ಮತ್ತಷ್ಟು
7 ದಿನದ ಯಡಿಯೂರಪ್ಪ ಸರಕಾರ ರಾಜೀನಾಮೆ
ಅಂದು ವಚನಭ್ರಷ್ಟ ಇಂದು ವಿಶ್ವಾಸ ದ್ರೋಹಿ
ಸಂಧಾನಕ್ಕೆ ಜಗ್ಗದ ದೇವೇಗೌಡ
ಕಾಂಗ್ರೆಸ್‌‌‌‌‌‌‌‌‌‌ನೊಂದಿಗೆ ಮತ್ತೆ ಮದುವೆ!
ಬಿಜೆಪಿ,ಜೆಡಿಎಸ್ ತರಾಟೆಗೆ ಕಾಂಗ್ರೆಸ್ ಸಜ್ಜು
ಆಡಿಸಿ ನೋಡು ಬೀಳಿಸಿ ನೋಡು....?