ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕೈ ಬಿಡದ ಕಾಂಗ್ರೆಸ್ : ಜೆಡಿ(ಎಸ್) ಆಶಾಭಾವ
ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ - ಜೆಡಿ(ಎಸ್) ಮೈತ್ರಿಸರ್ಕಾರ ಬರುವ ನಿರೀಕ್ಷೆಯಿದೆ ಎಂದು ಜೆಡಿ(ಎಸ್) ಶಾಸಕ ಬಿ.ಸಿ.ಪಾಟೀಲ್ ಖಾಸಗಿ ಟಿ.ವಿ. ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇಂದು ಬೆಳಿಗ್ಗೆ 8 ಘಂಟೆಗೆ ಕೇಂದ್ರದ ಸಚಿವ ಸಂಪುಟ ತುರ್ತು ಸಭೆ ಸೇರಿ ರಾಜ್ಯದಲ್ಲಿ ರಾಷ್ಟ್ತ್ರಪತಿ ಆಡಳಿತ ಹೇರುವ ಬಗ್ಗೆ ತುರ್ತು ನಿರ್ಣಯ ಕೈಗೊಂಡಿದ್ದುದರ ಬಗ್ಗೆ ಬಿ.ಸಿ.ಪಾಟೀಲರು ಪ್ರತಿಕ್ರಿಯೆಯನ್ನು ನೀಡುತ್ತಿದ್ದರು.

ಈಗೇನಿದ್ದರೂ ರಾಷ್ಟ್ತ್ರಪತಿ ಆಡಳಿತ ಜಾರಿಯಲ್ಲಿದೆಯಷ್ಟೇ, ಹಾಗೆಂದ ಮಾತ್ರಕ್ಕೆ ವಿಧಾನಸಭೆಯನ್ನು ವಿಸರ್ಜಿಸಿಲ್ಲ ಅಮಾನತ್ತಿನಲ್ಲಿಡುತ್ತಾರೆ ಅಷ್ಟೇ. ಅಮಾನತ್ತಿನಲ್ಲಿಟ್ಟ ವಿಧಾನಸಭೆಯನ್ನು ಎಂದಾದರೂ ಪುನಶ್ಚೇತನ ಗೊಳಿಸಬಹುದು.

ನಮಗಂತೂ ಮಧ್ಯಂತರ ಚುನಾವಣೆ ಬೇಕಿಲ್ಲ ನಾವಷ್ಟೇ ಅಲ್ಲ ಕಾಂಗ್ರೆಸ್ಸಿಗರು ಅಷ್ಟೇ ಮಧ್ಯಂತರ ಚುನಾವಣೆಗೆ ವಿರುದ್ಧವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವ ಸಮಯದಲ್ಲಾದರೂ ನಾವು ಒಂದಾಗಬಹುದು ಮತ್ತೆ ಮರು ಮೈತ್ರಿ ಸಾಧ್ಯತೆ ಬಗ್ಗೆ ನಮ್ಮ ಅಚಲ ವಿಶ್ವಾಸವಿದೆ ಇಲ್ಲಿ ಯಾರು ಮೊದಲು ಬಾಗಿಲು ತಟ್ಟುತ್ತಾರೋ ಕಾದು ನೋಡಿ ಎಂದಷ್ಟೇ ಉತ್ತರಿಸಿದರು.
ಮತ್ತಷ್ಟು
ಮತ್ತೆ ರಾಷ್ಟ್ರಪತಿ ಆಡಳಿತ
ತಪ್ಪಿನ ಅರಿವಾಯಿತು: ಯಡಿಯೂರಪ್ಪ
7 ದಿನದ ಯಡಿಯೂರಪ್ಪ ಸರಕಾರ ರಾಜೀನಾಮೆ
ಅಂದು ವಚನಭ್ರಷ್ಟ ಇಂದು ವಿಶ್ವಾಸ ದ್ರೋಹಿ
ಸಂಧಾನಕ್ಕೆ ಜಗ್ಗದ ದೇವೇಗೌಡ
ಕಾಂಗ್ರೆಸ್‌‌‌‌‌‌‌‌‌‌ನೊಂದಿಗೆ ಮತ್ತೆ ಮದುವೆ!