ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ದೇವೇಗೌಡರ ತಪ್ಪಿದ ಲೆಕ್ಕಾಚಾರ
ದೇವೇಗೌಡರ ಚಾಣಕ್ಯ ತಂತ್ರ ಲೆಕ್ಕ ತಪ್ಪಿದೆ. ಮಣ್ಣಿನ ಮಗನೆಂದೇ ಖ್ಯಾತರಾದ ದೇವೇಗೌಡರು ಮತ್ತೊಮ್ಮೆ ಕಾಂಗ್ರೆಸಿನ ಬಾಗಿಲು ತಟ್ಟಲು ಹೋಗಿದ್ದಾರೆ.

ಮೊದಲಿಗೆ ಕಾಂಗ್ರೆಸ್ಸಿನೊಂದಿಗೆ ಜೊತೆಗೂಡಿ ಸರ್ಕಾರ ರಚಿಸಿ ಅವರ ವಿರುದ್ಧವೇ ಷಡ್ಯಂತ್ರ ರೂಪಿಸುವಲ್ಲಿ ಯಶಸ್ವಿಯಾದ ಗೌಡರು ತಮ್ಮ ಮುಂದಿನ ತಂತ್ರಕ್ಕೆ ಮಗನನ್ನು ಮುಂದಿಟ್ಟರು. ಮಗನೊಂದಿಗೆ ವಿರುದ್ಧವಾಗಿದ್ದೇನೆ ಎಂಬ ತೋರಿಕೆಯ ಮಾತನಾಡುತ್ತ ಹಿಂಬದಿಯಲ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದುದು ಎಲ್ಲರಿಗೂ ತಿಳಿದ ವಿಚಾರವೇ.

ಯಾವಾಗ ತಮ್ಮ ಮಗನಿಂದ ಅಧಿಕಾರ ತಪ್ಪಿ ಹೋಗುತ್ತಿದೆ ಎಂದರಿವಾದಾಗ ಎಚ್ಚೆತ್ತ ಗೌಡರು ಕಾಂಗ್ರೆಸ್ ಪಾಳಯದಲ್ಲಿನ ಉತ್ಸಾಹವನ್ನು ಮನಗಂಡು ಅವರ ಭಿಕ್ಷೆಯನ್ನು ಬೇಡಲು ಹೋಗಿ ಮುಖ ತಿರುವಿಸಿಕೊಂಡು ಬಂದರು.

ಎಂ.ಪಿ.ಪ್ರಕಾಶ್ ಅವರ ಪಾಳಯ ಮತ್ತೊಮ್ಮೆ ಕಾಂಗ್ರೆಸ್ ಬಾಗಿಲಿಗೆ ಎಡತಾಕಿದಾಗ ತಮ್ಮ ಮಗನ ಅಧಿಕಾರಕ್ಕೆ ಸಂಚಕಾರ ಬರುವುದನ್ನು ಮನಗಂಡ ಗೌಡರಿಂದ ಮತ್ತೊಮ್ಮೆ ಬಿಜೆಪಿಯೊಂದಿಗೆ ಮರುಹೊಂದಾಣಿಕೆಯ ಯತ್ನ ನಡೆಯಿತು.

ಕಾಂಗ್ರೆಸ್ ಪಾಳಯದಲ್ಲಿನ ಉತ್ಸಾಹದಿಂದ ಮುದಗೊಂಡ ದೇವೇಗೌಡರು ಬಿಜೆಪಿಗೆ ಕೈಕೊಟ್ಟು ಮತ್ತೊಮ್ಮೆ ಕಾಂಗ್ರೆಸ್ ಬಾಗಿಲಲ್ಲಿ ನಿಂತಿದ್ದಾರೆ.

ಆದರೆ ಈ ಸಂದರ್ಭದಲ್ಲಿ ಪ್ರಧಾನಿ ವಿದೇಶ ಯಾತ್ರೆಗೆ ತೆರಳಲು ಸಿದ್ಧರಾಗಿರುವುದು ಹಾಗೂ ಸೋನಿಯಾಗಾಂಧಿಯವರನ್ನು ಭೇಟಿ ಮಾಡುವ ಯತ್ನದಲ್ಲಿರುವುದು ದೇವೇಗೌಡರ ಅವಕಾಶವಾದಿ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಮತ್ತಷ್ಟು
ಕೈ ಬಿಡದ ಕಾಂಗ್ರೆಸ್ : ಜೆಡಿ(ಎಸ್) ಆಶಾಭಾವ
ಮತ್ತೆ ರಾಷ್ಟ್ರಪತಿ ಆಡಳಿತ
ತಪ್ಪಿನ ಅರಿವಾಯಿತು: ಯಡಿಯೂರಪ್ಪ
7 ದಿನದ ಯಡಿಯೂರಪ್ಪ ಸರಕಾರ ರಾಜೀನಾಮೆ
ಅಂದು ವಚನಭ್ರಷ್ಟ ಇಂದು ವಿಶ್ವಾಸ ದ್ರೋಹಿ
ಸಂಧಾನಕ್ಕೆ ಜಗ್ಗದ ದೇವೇಗೌಡ