ರಾಜಕೀಯ ಘಟನಾವಳಿಗಳಿಂದ ಜರ್ಜರಿತರಾಗಿರುವ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರುಗಳ ಸಭೆ ಇದೀಗ ಆರಂಭವಾಗಿದೆ.
ಜೆಡಿ(ಎಸ್)ನೊಂದಿಗೆ ಮರುಮೈತ್ರಿ ಮಾಡಿಕೊಂಡು ತಪ್ಪು ಮಾಡಿದೆವು ಅದಕ್ಕಾಗಿ ರಾಜ್ಯದ ಜನತೆಯಲ್ಲಿ ಕ್ಷಮೆ ಯಾಚಿಸುತ್ತೇವೆ ಎಂದು ಬಿಜೆಪಿ ವಕ್ತಾರ ಸಿ.ಟಿ.ರವಿ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡರು , ಮರು ಚುನಾವಣೆಯೇ ಈಗ ನಮ್ಮ ಮುಂದಿರುವ ದಾರಿ. ಮತ್ತೆ ಜನಾದೇಶ ಪಡೆದೇ ಆಡಳಿತದ ಚುಕ್ಕಾಣಿ ಹಿಡಿಯುವುದೇ ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.
ಇಂದಿನ ಶಾಸಕಾಂಗ ಪಕ್ಷದ ಸಭೆಯ ನಂತರ ತಮ್ಮ ಮುಂದಿನ ಕಾರ್ಯಕ್ರಮವನ್ನು ರೂಪಿಸಲಿದ್ದೇವೆ ಎಂದು ಹೇಳಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಮತ್ತೊಮ್ಮೆ ಧರ್ಮಯಾತ್ರೆಯ ಬಗ್ಗೆ ಮರು ಚಿಂತನೆ ಸಹ ನಡೆದಿದೆ. ಸುಮಾರು ಎರಡು ಗಂಟೆಯ ಹೊತ್ತಿಗೆ ಶಾಸಕಾಂಗ ಪಕ್ಷದ ಪ್ರಮುಖ ನಿರ್ಣಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸುವ ಸಾಧ್ಯತೆ ಇದೆ.
ಇದೀಗ ಬಂದ ಮಾಹಿತಿಯಂತೆ ನಾಳೆ ಕೋಲಾರದಿಂದ ಬಿಜೆಪಿ ಧರ್ಮಯಾತ್ರೆ ಮರು ಆರಂಭಗೊಳ್ಳುವ ನೀರೀಕ್ಷೆಯಿದೆ. ಹಾಗೂ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಜೆಡಿ(ಎಸ್) ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸುವ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಸಹ ತಿಳಿದು ಬಂದಿದೆ.
|