ಬಿಜೆಪಿಗೆ ಅಧಿಕಾರ ತಪ್ಪಿಸಲು ನಡೆಸಿದ ಕುತಂತ್ರಕ್ಕೆ ತಕ್ಕ ಪಾಠ ಜನತೆ ಕಲಿಸಲಿದ್ದಾರೆ. ನಮ್ಮ ವಿರುದ್ದ ಮಾಡಿದ ದ್ರೋಹವನ್ನು ಜನರ ಮುಂದೆ ಹೇಳುತ್ತೇವೆ ಎಂದು ರಾಜ್ಯ ಬಿಜೆಪಿಯ ಹಿರಿಯ ಮುಖಂಡ ಆರ್. ಅಶೋಕ್ ತಿಳಿಸಿದ್ದಾರೆ.
ಜೆಡಿ(ಎಸ್) ಜೊತೆ ನಿಕಟ ಸಂಪರ್ಕಗಳಿಸಿದ್ದ ಆರ್.ಅಶೋಕ್ ರವರು ತಾವು ಜೆಡಿ(ಎಸ್) ಪಾಳಯಕ್ಕೆ ಭೇಟಿ ನೀಡಿದಾಗಿನ ಅನುಭವವನ್ನು ಹಂಚಿಕೊಂಡ ಅವರು ಜೆಡಿ(ಎಸ್) ಪಾಳಯದಲ್ಲಿ ದೇವೇಗೌಡರ ಕುಟುಂಬ ಹೊರತು ಪಡಿಸಿ ಉಳಿದೆಲ್ಲಾ ಶಾಸಕರು ಒಂದು ತೆರೆನಾದ ಉಸಿರು ಕಟ್ಟಿದ ವಾತಾವರಣದಲ್ಲಿ ಸಿಲುಕಿದ್ದಾರೆ.ಜೆಡಿ(ಎಸ್) ಈಗ ಒಂದು ಪಕ್ಷವಾಗಿ ಉಳಿದಿಲ್ಲ ಎಂದು ಲೇವಡಿ ಮಾಡಿದರು.
ಯಾರದೋ ಮಾತು ಕೇಳಿಕೊಂಡು ನಾವು ಬಿಜೆಪಿಗೆ ದ್ರೋಹ ಬಗೆದಿದ್ದೇವೆ, ಜನ ನಮ್ಮನ್ನು ಮುಂದೆ ಸ್ವೀಕರಿಸುತ್ತಾರಾ ಎಂದು ನೋಡಬೇಕು. ಪಕ್ಷದ ಹಿರಿಯ ನಾಯಕರು ವಿಪ್ ಜಾರಿ ಮಾಡಿಯಾದ ಮೇಲೆ ನಾವೇನು ಮಾಡುವುದು ಅಂತ ಚೆನ್ನಿಗಪ್ಪನವರು ಅಳಲು ತೋಡಿಕೊಂಡಿದ್ದನ್ನು ಅಶೋಕ್ ಅವರು ಸುದ್ದಿಮಾಧ್ಯಮದವರ ಎದುರು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ತಮ್ಮ ಪಕ್ಷದ ಎಲ್ಲಾ ಶಾಸಕರು ಒಕ್ಕೊರಲಿನಿಂದ ಯಾವುದೇ ಅಧಿಕಾರ, ಆಮಿಷಕ್ಕೊಳಗಾಗದೇ ಚುನಾವಣೆ ಎದುರಿಸಲು ಸಿದ್ಧರಾಗಿರುವುದು ಚೇತೋಹಾರಿ ಸಂಗತಿ. ಇದು ಪಕ್ಷದ ಸಿದ್ದಾಂತಗಳಲ್ಲಿ ನಾವಿಟ್ಟ ನಂಬಿಕೆಗೆ ಸಾಕ್ಷಿ ಎಂದೂ ಸಹ ಹೇಳಿದರು.
|