ಜೆಡಿ(ಎಸ್) ವಿಪ್ ಬಗ್ಗೆ ಈಗಾಗಲೇ ಜೆಡಿ(ಎಸ್) ಶಾಸಕಾಂಗ ವಲಯದಲ್ಲಿ ವ್ಯಾಪಕ ಅಸಮಾಧಾನದ ಅಲೆಯೆದ್ದಿದ್ದು ಪಕ್ಷದ ಮುಂದಿನ ದಿನದ ಹಾದಿಯ ಬಗ್ಗೆ ಹಲವಾರು ಪ್ರಶ್ನೆಗಳು ಕಾಡತೊಡಗಿವೆ.
ಒಂದೆಡೆ ದೇವೇಗೌಡರು ಕಾಂಗ್ರೆಸ್ ಪಕ್ಷದ ಬೆಂಬಲ ಪಡೆಯಲು ದೆಹಲಿಯಲ್ಲಿ ವಿಫಲ ಯತ್ನ ನಡೆಸಿದ್ದರೆ ಇತ್ತ ದೇವೇಗೌಡರ ಆಪ್ತವಲಯವೆಂದೇ ನಂಬಲಾಗಿದ್ದ ಶಾಸಕರನೇಕರು ಪಕ್ಷದ ವಿಪ್ ವಿರುದ್ಧವೇ ಧ್ವನಿ ಎತ್ತಿರುವುದು ಜೆಡಿ(ಎಸ್) ವರಿಷ್ಠರಿಗೆ ನುಂಗಲಾರದ ತುತ್ತಾಗಿದೆ.
ವಿಪ್ ಜಾರಿಗೆ ಸಂಬಂಧಿಸಿ ನಿನ್ನೆ ನಡೆದ ಚಟುವಟಿಕೆಗಳಿಂದ ತಮ್ಮ ಮನಸ್ಸಿಗೆ ತುಂಬಾ ಬೇಸರವಾಗಿದೆಯೆಂದು ಜೆಡಿಎಸ್ ಮುಖಂಡ ಚೆಲುವರಾಯಸ್ವಾಮಿ ತಿಳಿಸಿದ್ದಾರೆ. ಈ ಘಟನೆ ಅನಪೇಕ್ಷಿತವಾಗಿತ್ತು. ಆದರೂ ತಮ್ಮ ಪಕ್ಷದ ವರಿಷ್ಠರಾದ ದೇವೇಗೌಡರು ಮುಂದೆ ಕೈಗೊಳ್ಳುವ ನಿರ್ಧಾರಕ್ಕೇ ನಾವು ಬದ್ಧರಾಗಿದ್ದೇವೆ ಎಂದೂ ಸಹ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
|