ಇದೀಗ ರಾಜ್ಯದಲ್ಲಿ ಹೋಮ ಹವನದೆದುರು ಮಾಟ ಮಂತ್ರಗಳು ತಲೆ ಎತ್ತಿವೆ. ಬ್ಲಾಕ್ ಮ್ಯಾಜಿಕ್ ಮಾಡಿ ನನ್ನನ್ನು ವಂಚಿಸಿದರು, ನನ್ನ ಪ್ರಾಣಕ್ಕೇ ಸಂಚಕಾರ ಬಂದಿದೆ ಎಂದೆಲ್ಲಾ ಹೇಳಿದ್ದ ಯಡಿಯೂರಪ್ಪನವರು ಇಂದು ಇದ್ದಕ್ಕಿದ್ದಂತೆ ತಮ್ಮ ಮಾತಿನ ವರಸೆಯನ್ನು ಕೊಂಚ ಬದಲಿಸಿದ್ದಾರೆ.
ನೆನ್ನೆಯವರೆಗೂ ಜೀವದ ಭಯದಿಂದ ಕಂಗೆಟ್ಟಿದ್ದ ಯಡಿಯೂರಪ್ಪನವರು ಇಂದು ಮಾಟ ಮಂತ್ರಗಳಿಗೆ ಹೆದರುವುದಿಲ್ಲ ನನಗೆ ಎಲ್ಲಿಯವರೆಗೆ ನಮ್ಮ ಐದೂವರೆ ಕೋಟಿ ಕನ್ನಡಿಗರ ಮತ್ತು ದೇವರ ಆಶೀರ್ವಾದವಿದೆ. ಯಾವ ಮಾಟ ಮಂತ್ರಕ್ಕೂ ಹೆದರುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ದೇವೇಗೌಡ ಮತ್ತು ಕುಮಾರಸ್ವಾಮಿ ಮಾಡಿದ ವಿಶ್ವಾಸದ್ರೋಹ ಕರ್ನಾಟಕದ ಜನತೆಯ ಅರಿವಿಗೆ ಬಂದಿದೆ. ಮತ್ತೊಮ್ಮೆ ಜನರ ಮುಂದೆ ಹೋಗಿ ಅವರ ಆಶೀರ್ವಾದದ ಸಹಾಯದಿಂದ ಅಧಿಕಾರ ಪಡೆದೇ ಪಡೆಯುತ್ತೇವೆ ಎಂಬ ವಿಶ್ವಾಸ ನಮ್ಮದು ಎಂದು ಯಡಿಯೂರಪ್ಪ ಮಾಧ್ಯಮದ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ
|