ನೆನ್ನೆಯಷ್ಟೇ ವಿಜೃಂಭಿಸಿದ್ದ ಕುಮಾರಸ್ವಾಮಿಯವರು ಇದೀಗ ತಣ್ಣಗಾಗಿದ್ದಾರೆ. ಈಗ ಉಂಟಾಗಿರುವ ರಾಜಕೀಯ ಪರಿಸ್ಥಿತಿಯಲ್ಲಿ ನನಗೆ ಏನು ಮಾಡಬೇಕೆಂಬುದೇ ತೋರುತ್ತಿಲ್ಲ. ಇಂತಹ ಸನ್ನಿವೇಶ ನಾವಾಗೇ ಬರಮಾಡಿಕೊಂಡಿದ್ದಲ್ಲ ಅದು ಬಿಜೆಪಿಯವರು ತಾವಾಗೆ ತಂದುಕೊಂಡದ್ದು. ಅದಕ್ಕಾಗಿ ಮಾಧ್ಯಮದವರು ನನ್ನನ್ನು ವೃಥಾ ದೂರುವುದು ಸರಿಯಲ್ಲ ಎಂದರು.
ಮತ್ತೆ ಕಾಂಗ್ರೆಸ್‌ನೊಂದಿಗೆ ಮರು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯ ಬಗ್ಗೆ ಉತ್ತರಿಸಿದ ಕುಮಾರಸ್ವಾಮಿಯವರು ಈ ದೊಂಬರಾಟದಿಂದ ನನಗೀಗಾಲೇ ರೋಸಿ ಹೋಗಿದೆ. ಸರ್ಕಾರ ನಡೆಸಿದ ಹಳೆಯ ಕಹಿ ಅನುಭವಗಳನ್ನು ನಾನಿನ್ನೂ ಮರೆತಿಲ್ಲ, ಇನ್ನು ಮರುಮೈತ್ರಿಯ ನೆವದಲ್ಲಿ ಯಾರೊಬ್ಬರ ಬಾಗಿಲನ್ನು ತಾಕುವ ಅವಶ್ಯಕತೆಯಿಲ್ಲ ಎಂದು ಖಾರವಾಗಿ ನುಡಿದರು.
ಮುಂದಿನ ದಿನಗಳ ಆಗುಹೋಗುಗಳ ಅಥವಾ ತಮ್ಮದೊಂದು ವೇದಿಕೆ ಸಜ್ಜು ಮಾಡುವ ಕುರಿತಾಗಿ ನಿರ್ದಿಷ್ಟವಾಗಿ ಉತ್ತರಿಸದ ಕುಮಾರಸ್ವಾಮಿಯವರು ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ತೆರೆನಾದ ಹೊಸ ಪ್ರಯೋಗಗಳ ಕುರಿತು ಚಿಂತನೆ ನಡೆಸಿಲ್ಲ ನಾನೀಗಾಗಲೇ ನನ್ನ ಅನಿಸಿಕೆಯನ್ನು ಅಪ್ಪಾಜಿಯವರಿಗೆ ನೇರವಾಗಿ ತಿಳಿಸಿದ್ದೇನೆ ಎಂದು ಮಾಜಿಮುಖ್ಯ ಮಂತ್ರಿ ಕುಮಾರಸ್ವಾಮಿಯವರು ತಿಳಿಸಿದರು.
|