ಬಾಲಿವುಡ್ ಖ್ಯಾತ ತಾರಾ ದಂಪತಿಗಳಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಮಂಗಳೂರಿಗೆ ಭೇಟಿ ನೀಡಿದ್ದಾರೆ.
ಇಂದು ಸಂಜೆ ನಗರದ ತಾಜ್ ಮಂಜರೂನ್ ಹೋಟೆಲಿನಲ್ಲಿ ಐಶ್ವರ್ಯಾರ ತಂದೆ ಕೃಷ್ಣರಾಜ್ ಹೆಗ್ಡೆಯವರ ಹುಟ್ಟುಹಬ್ಬ ಆಚರಣೆ.
ನಾಳೆ ಕುಂಬ್ಳೆಯ ಸಂಬಂಧಿಗಳ ಮನೆಯಲ್ಲಿ ಮದುವೆಯ ಸಮಾರಂಭವು ನಡೆಯಲಿದೆ. ಆದರೆ ಇವರ ಮಂಗಳೂರು ಆಗಮನದ ವಿಚಾರವಾಗಿ ಮಾಧ್ಯಮದವರಿಗಾಗಲೀ, ಅಭಿಮಾನಿಗಳಿಗಾಗಲೀ ಯಾವುದೇ ಮಾಹಿತಿ ನೀಡಲಾಗಿಲ್ಲ.
ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ತಿಳಿದು ಬಂದಿದೆ.
|