ತಂದೆ ದೇವೇಗೌಡರು ಉರುಳಿಸುವ ರಾಜಕೀಯ ದಾಳಗಳಿಂದಾಗಿ ಅಂತಿಮವಾಗಿ ಜನರ ಅಸಮಾಧಾನ ತಮ್ಮೆಡೆಗೆ ತಿರುಗುತ್ತಿದೆ ಎಂಬುದನ್ನು ಮನಗಂಡಂತಿರುವ ಮಾಜಿ ಮುಖ್ಯಮಂತ್ರಿ ಹೊಸತೊಂದು ಪ್ರಾದೇಶಿಕ ಪಕ್ಷವನ್ನು ಕಟ್ಟುವ ಇಂಗಿತವನ್ನು ಮಾಧ್ಯಮದವರ ಮುಂದೆ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ಕುಮಾರಸ್ವಾಮಿಯವರು ಈ ಚಿಂತನೆ ನಡೆಸಿದ್ದು, ಈ ಕುರಿತು ದೇವೇಗೌಡರಿಗೆ ಅವರು ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ಮಾಜಿ ಪ್ರಧಾನಿ ದೇವೇಗೌಡ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಕಾಂಗ್ರೆಸ್‌ನೊಂದಿಗೆ ಮರು ಮೈತ್ರಿಯ ಸಾಧ್ಯತೆಯ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಆದರೆ ಇತ್ತ ರಾಜ್ಯದಲ್ಲಿ ಜೆಡಿಎಸ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಲೆ ದೋರಿದೆ.
|