ಹಲವು ಸರ್ಕಸ್‌ಗಳ ನಡುವೆ ಅಧಿಕಾರ ಸಿಗುವ ಸಂಭವ ಕಂಡುಬಂದ್ದದ್ದರಿಂದ ಮೊಟುಕುಗೊಳಿಸಲಾಗಿದ್ದ ಧರ್ಮಯಾತ್ರೆಯನ್ನು ನವೆಂಬರ್ 26ರಂದು ಮತ್ತೆ ಆರಂಭಿಸಲು ಹಾಗೂ ಡಿಸೆಂಬರ್ 9ರಂದು ಪಕ್ಷದ ಪ್ರಮುಖ ಕಾರ್ಯಕಾರಣಿ ಸಭೆಯನ್ನು ನಡೆಸಲು ಬಿಜೆಪಿ ಯೋಜಿಸಿದೆ.
ತಮ್ಮ ನೇತೃದ್ವದ ಸರ್ಕಾರಕ್ಕೆ ಬೆಂಬಲ ನೀಡದೆ ಮತ್ತೊಮ್ಮೆ ವಿಶ್ವಾಸದ್ರೋಹ ಮಾಡಿದ ದೇವೇಗೌಡ - ಕುಮಾರಸ್ವಾಮಿ ಜೋಡಿಯ ದುಷ್ಟತನವನ್ನು ಮಹಾಜನತೆಯ ಮುಂದೆ ತೆರೆದಿಡಲಾಗುವುದು. ಇದರ ಮೊದಲ ಹಂತವಾಗಿ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನಗಳಲ್ಲಿ ಸಾಗುವ ಈ ಯಾತ್ರೆ ಕೋಲಾರದಲ್ಲಿ ಕೊನೆಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಧ್ಯಮದ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ತಮಗಾಗಿರುವ ಅನ್ಯಾಯವನ್ನು ಜನತಾ ನ್ಯಾಯಲಯದ ಮುಂದೆ ಬಿನ್ನವಿಸಿಕೊಂಡು ಅವರ ಆಶೀರ್ವಾದ - ಬೆಂಬಲ ಪಡೆದು ಮುಂಬರುವ ಚುನಾವಣೆಯಲ್ಲಿ ಖಚಿತ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವ ಆತ್ಮವಿಶ್ವಾಸ ತಮಗಿದೆ ಎಂದು ಯಡಿಯೂರಪ್ಪ ಈ ಸಂದರ್ಭದಲ್ಲಿ ತಿಳಿಸಿದರು.
|