ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮೈತ್ರಿ ಇಲ್ಲ; ಕಾಂಗ್ರೆಸ್ ಚುನಾವಣೆಗೆ ಸಿದ್ಧ
ಜೆಡಿಎಸ್ ವರಿಷ್ಠ ದೇವೇಗೌಡರು ದೆಹಲಿಗೆ ತೆರಳಿ ಕಾಂಗ್ರೆಸ್ ಬಾಗಿಲಲ್ಲಿ ಕಾದು ನಿಂತಿದ್ದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ಸಿಗರ ನಿಲುವೇನಿರಬಹುದು ಎಂಬ ಕುತೂಹಲ ಜನರ ಮುಂದಿರುವಾಗಲೇ ರಾಜ್ಯ ಕಾಂಗ್ರೆಸ್ ನಾಯಕರು ಅದಕ್ಕೆ ತೆರೆ ಎಳೆದಿದ್ದಾರೆ.

ಯಾವುದೇ ಪಕ್ಷದ ನೆರವಿನೊಂದಿಗೆ ಸರ್ಕಾರ ರಚಿಸುವ ಉದ್ದೇಶ ಕಾಂಗ್ರೆಸ್ಗಿಲ್ಲ. ಈ ಹಿಂದೊಮ್ಮೆ ಅಂಥ ಅವಕಾಶ ಬಂದಿದ್ದಾಗಲೇ ನಾವು ನಿರಾಕರಿಸಿದ್ದೆವು. ಇವೆಲ್ಲಾ ನಡೆಯುವ ವಿಷಯವೂ ಅಲ್ಲ. ನಮ್ಮ ಗುರಿ ಏನಿದ್ದರೂ ಹೊಸ ಚುನಾವಣೆ ಎಂದು ಕಾಂಗ್ರೆಸ್ ನಾಯಕ ಧರಂಸಿಂಗ್ ನುಡಿದಿದ್ದಾರೆ.

ಈಗ ಬಿಜೆಪಿ ನೇತೃತ್ವದ ಸರ್ಕಾರ ಬಿದ್ದಿರುವುದು ಆ ಎರಡೂ ಮಿತ್ರ ಪಕ್ಷಗಳ ನಡುವಿನ ಕಚ್ಚಾಟದಿಂದ. ಅದರೆ ಇದಕ್ಕೆ ಕಾಂಗ್ರೆಸ್ ಕಾರಣ ಎಂದು ಆ ಪಕ್ಷಗಳ ಕೆಲ ನಾಯಕರು ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಈ ರೀತಿಯ ಯಾವುದೇ ಘಟನೆ ಸಂಭವಿಸಿದರೂ ಇದಕ್ಕೆ ಕಾಂಗ್ರೆಸ್ ಕಾರಣ, ಅದರ ಪ್ರಚೋದನೆ ಕಾರಣ ಎಂದು ಪದೇ ಪದೇ ಹೇಳುವುದು ಪರಿಪಾಠವಾಗಿದೆ. ಬಿಜೆಪಿ ಪ್ರಯತ್ನ ವಿಫಲವಾದರೆ ಅದಕ್ಕೆ ನಾವು ಹೇಗೆ ಕಾರಣರಾಗುತ್ತೇವೆ ಎಂದು ಈ ಸಂದರ್ಭದಲ್ಲಿ ನಾವು ಕೇಳ ಬಯಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಹಲವು ಬಾರಿ ಕೇಳಲಾದ ಪ್ರಶ್ನೆಗಳಿಗೆ ನಾನು ಸ್ಪಷ್ಟಪಡಿಸಿದ್ದೇನೆ. ನಮ್ಮಲ್ಲಿ ಸಂಖ್ಯಾಬಲವಿಲ್ಲ. ಆದ್ದರಿಂದ ನಾವು ಸರ್ಕಾರ ರಚಿಸಬೇಕು ಎಂದು ಪ್ರಯತ್ನ ಪಡುವುದಿಲ್ಲ, ಆ ಇಚ್ಛೆಯೂ ನಮಗಿಲ್ಲ. ಹಾಗೇನಾದರೂ ಆದರೆ ನಾವು ಚುನಾವಣೆ ಎದುರಿಸಿ ಬಹುಮತ ಪಡೆಯುತ್ತೇವೆಯೇ ಹೊರತು ಬೇರೆ ಮಾರ್ಗವನ್ನು ಅನುಸರಿಸುವುದಿಲ್ಲ ಎಂದು ಖರ್ಗೆ ಈ ಸಂದರ್ಭದಲ್ಲಿ ನುಡಿದರು.
ಮತ್ತಷ್ಟು
ಬಿಜೆಪಿ ನವೆಂಬರ್ 26 ರಿಂದ ಧರ್ಮಯಾತ್ರೆ
ಮತ್ತೊಂದು ಗೊಂದಲ: ಕಾಂಗ್ರೆಸ್-ಜೆಡಿಎಸ್ ಮರುಮೈತ್ರಿ!
ಹೊಸ ಪಕ್ಷ ಇಂಗಿತ: ಕುಮಾರನಿಗೆ ಯಾರ ಸಹವಾಸ ಬೇಡ?
ಸಿಡಿಯಲು ಸಜ್ಜಾಗಿದೆ "ಗಣಿ ರೆಡ್ಡಿ" ಪುಸ್ತಕ ಬಾಂಬ್!
ಕುಮಾರಸ್ವಾಮಿ ಹೊಸ ಪಕ್ಷ ಸ್ಥಾಪನೆ ಇಂಗಿತ
ಮಂಗಳೂರಿನಲ್ಲಿ ಐಶ್ – ಅಭಿ