ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ರಾಜಕೀಯ ಚಿತ್ರಣ ಹಾಗೂ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಪ್ರಾದೇಶಿಕ ಪಕ್ಷ ಕಟ್ಟಲಿದ್ದಾರೆ ಎಂಬ ಸುದ್ದಿಯ ಕುರಿತು ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತಾ ಸ್ಪಷ್ಟೀಕರಣ ನೀಡಿದ್ದಾರೆ.
ವಾಸ್ತವವಾಗಿ ಇದು ಹೊಸ ಪ್ರಾದೇಶಿಕ ಪಕ್ಷವಲ್ಲ. ಬದಲಿಗೆ ಈಗಿರುವ ಜೆಡಿಎಸ್ ಪಕ್ಷಕ್ಕೆ ಪ್ರಾದೇಶಿಕ ಸ್ವರೂಪ ನೀಡುವ ವಿಭಿನ್ನ ಯತ್ನ ಎಂದು ದತ್ತ ಸ್ಪಷ್ಟೀಕರಿಸಿದ್ದಾರೆ.
ಹಾಗೆ ನೋಡಿದರೆ, ಬಿಜೆಪಿ, ಕಾಂಗ್ರೆಸ್‌ನಂಥ ರಾಷ್ಟ್ತ್ರೀಯ ಪಕ್ಷಗಳಿಗೆ ಹೋಲಿಸಿದರೆ ಜೆಡಿಎಸ್ ಪ್ರಾದೇಶಿಕ ಪಕ್ಷವೇ. ಹಾಗೆಂದು ಜನರೂ ಭಾವಿಸಿದ್ದಾರೆ. ಆ ಎರಡು ಘಟಾನುಘಟಿ - ಪ್ರಬಲ ಪಕ್ಷಗಳ ಎದುರು ನಮ್ಮ ಪಕ್ಷ ಜೀವಂತವಾಗಿದೆ, ಸಮೃದ್ಧವಾಗಿದೆ ಹಾಗೂ ಸಮಯ ಬಂದಾಗಲೆಲ್ಲಾ ನಿರ್ಣಾಯಕ ಸ್ಥಾನವನ್ನಲಂಕರಿಸುವ ಮಟ್ಟದಲ್ಲೂ ಇದೆ.
ಈ ಸ್ವರೂಪವನ್ನು ಮತ್ತಷ್ಟು ಸದೃಢಗೊಳಿಸುವುದು ಸದ್ಯದ ಉದ್ದೇಶ. ಅದರೆ ಅದಕ್ಕೆ ಅನುಸರಿಸಬೇಕಾದ ಮಾರ್ಗವೇನು ಎಂಬುದರ ಕುರಿತು ಚಿಂತನೆ ನಡೆದಿದೆ. ಕುಮಾರಸ್ವಾಮಿಯವರು ಕರ್ನಾಟಕದ ಆಶಾಕಿರಣ ಹಾಗೂ ಹೊಸತಲೆಮರಿನ ನಾಯಕ ಎಂದು ಜನತೆ ಒಪ್ಪಿಕೊಂಡಿರುವ ನಿಟ್ಟಿನಲ್ಲಿ ನಾವು ಸ್ಪಷ್ಟ ಯೋಜನೆಯನ್ನು ರೂಪಿಸಬೇಕಿದೆ ಎಂದು ದತ್ತ ಈ ಸಂದರ್ಭದಲ್ಲಿ ನುಡಿದರು.
|