ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬೊಕ್ಕಸ ಲೂಟಿ ಮಾಡಿ ಚುನಾವಣೆ ಹೇರಿದ 'ಮಿತ್ರರು' : ಕಾಂಗ್ರೆಸ್
ತತ್ವ-ಸಿದ್ಧಾಂತಗಳ ತಳಹದಿಯಿಲ್ಲದೆ ಕೇವಲ ಸ್ವಾರ್ಥ ಮತ್ತು ಕುರ್ಚಿ ಹಿಡಿಯುವ ಉದ್ದೇಶಗಳನ್ನಿಟ್ಟುಕೊಂಡಿದ್ದ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮಹಾಜನತೆಯ ಮೇಲೆ ವಿನಾಕಾರಣ ಚುನಾವಣೆ ಹೇರಿವೆ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಭ್ರಷ್ಟರು - ಅಧಿಕಾರದಾಹಿಗಳಿಂದ ಕೂಡಿದ್ದ ಈ ಮೈತ್ರಿಕೂಟದ ಪಕ್ಷಗಳು ಛಾಪಾ ಕಾಗದದ ಮೇಲೆ ಷರತ್ತು ಒಪ್ಪಂದಗಳನ್ನು ಮಾಡಿಕೊಳ್ಳುವ ಕೆಟ್ಟ ಸಂಪ್ರದಾಯಕ್ಕೆ ನಾಂದಿಹಾಡಿವೆ. ಸ್ವಂತ ಹಿತಕ್ಕಾಗಿ ರಾಜ್ಯದ ಹಿತವನ್ನು ಬಲಿಕೊಟ್ಟು, 224 ಶಾಸಕರ ಅವಧಿ ಮೊಟಕುಗೊಳ್ಳುವುದಕ್ಕೂ ಇವು ನೇರ ಹೊಣೆಯಾಗಿವೆ ಎಂದು ಆಪಾದಿಸಿದರು.

ಈ ಹಿನ್ನೆಲೆಯಲ್ಲಿ ಈ ಎರಡೂ ಪಕ್ಷಗಳು ನಡೆಸಿರುವ ಭ್ರಷ್ಟಾಚಾರ, ಬೊಕ್ಕಸದ ಲೂಟಿ, ಅನಗತ್ಯ ಚುನಾವಣೆ ಹೇರುವ ಮೂಲಕ ಸರ್ಕಾರದ ಖಜಾನೆಗೆ ಹೊರೆ ಉಂಟುಮಾಡಿರುವುದು ಇವೇ ಮೊದಲಾದ ವಿಷಯಗಳ ಕುರಿತು ಜನರಿಗೆ ಮನವರಿಕೆ ಮಾಡಲು ಕಾಂಗ್ರೆಸ್ ಪಕ್ಷವು ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಿಂದ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ ಎಂದು ಖರ್ಗೆ ತಿಳಿಸಿದ್ದಾರೆ.
ಮತ್ತಷ್ಟು
ರಾಜ್ಯ(ಜ)ಕಾರಣ: ಕಾಂಗ್ರೆಸ್ ಬಾಗಿಲು ತಟ್ಟುವ ದಳ ಗುಂಪು
ದೇವೇಗೌಡ - ಕುಮಾರಸ್ವಾಮಿ ಪ್ರತಿಕೃತಿ ದಹನ
ಕುಮಾರಣ್ಣನದು ಪ್ರಾದೇಶಿಕ ಪಕ್ಷವಲ್ಲ : ವೈ.ಎಸ್.ವಿ. ದತ್ತ
ಮೈತ್ರಿ ಇಲ್ಲ; ಕಾಂಗ್ರೆಸ್ ಚುನಾವಣೆಗೆ ಸಿದ್ಧ
ಬಿಜೆಪಿ ನವೆಂಬರ್ 26 ರಿಂದ ಧರ್ಮಯಾತ್ರೆ
ಮತ್ತೊಂದು ಗೊಂದಲ: ಕಾಂಗ್ರೆಸ್-ಜೆಡಿಎಸ್ ಮರುಮೈತ್ರಿ!