ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಚುನಾವಣೆಗೆ ನಾವ್ ರೆಡಿ, ಟಿಕೆಟ್ ಕೊಡಿ ಎನ್ನುತ್ತಿದೆ ಮಹಿಳಾ ಕಾಂಗ್ರೆಸ್
ವಿಧಾನಸಭೆ ವಿಸರ್ಜನೆಗೊಂಡು ಚುನಾವಣೆಯ ಸಾಧ್ಯಾಸಾಧ್ಯತೆಯಲ್ಲಿರುವ ಕರ್ನಾಟಕದಲ್ಲಿ, ಮುಂಬರುವ ಚುನಾವಣೆಗಳಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಶಸ್ತ್ಯ ನೀಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಈಗಾಗಲೇ ಮನವಿ ಮಾಡಲಾಗಿದೆ.

ಕರ್ನಾಟಕದ ಚುನಾವಣೆಗಳಲ್ಲಿ ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯ ದೊರೆತಿಲ್ಲ. ಚುನಾವಣೆಗೆ ಸಾಕಷ್ಟು ಸಮಯವಿದ್ದರೂ, ಟಿಕೆಟ್‌ಗಾಗಿ ಸಾಕಷ್ಟು ಪೈಪೋಟಿ ಕೂಡಾ ಇದೆ.

ಆದರೆ ಚುನಾವಣೆಗೆ ಮುನ್ನವೇ, ಪಕ್ಷದ ಬಿ ಫಾರ್ಮ್‌ಗಳನ್ನು ಮಹಿಳೆಯರಿಗೆ ನೀಡುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡಬೇಕು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಣಿ ಸತೀಶ್ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಒತ್ತಾಯಿಸಿದ್ದಾರೆ.

ಈ ರೀತಿ ಪಕ್ಷ ನಿರ್ಧಾರ ಕೈಗೊಂಡರೆ ಡಮ್ಮಿ ಅಭ್ಯರ್ಥಿಗಳ ಬದಲು ಸಮರ್ಥ ಅಭ್ಯರ್ಥಿಗಳಿಗೆ ಅವಕಾಶ ನೀಡುವುದು ಸಾಧ್ಯ ವಾಗುತ್ತದೆ ಎಂದು ಅವರು ವಾದ ಮಂಡಿಸಿದ್ದಾರೆ.

ರಾಜ್ಯದಲ್ಲಿ ತನ್ನ ಸ್ವಂತ ಬಲದ ಮೇಲೆ ಮತ್ತೆ ಅಧಿಕಾರಕ್ಕೆ ಬರುವ ಅವಕಾಶ ಇದೀಗ ಕಾಂಗ್ರೆಸ್‌ಗೆ ಸೃಷ್ಟಿಯಾಗಿದೆ. ಈ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ಪಕ್ಷವನ್ನು ಸಂಘಟಿಸುವ ಜೊತೆಗೆ ಪಕ್ಷದ ವರ್ಚಸ್ಸನ್ನು ವೃದ್ಧಿ ಪಡಿಸಬೇಕಿದೆ ಸೋನಿಯಾಗೆ ಮನವರಿಕೆ ಮಾಡಿದ್ದಾಗಿ ರಾಣಿ ಸತೀಶ್ ತಿಳಿಸಿದ್ದಾರೆ.
ಮತ್ತಷ್ಟು
ಪಕ್ಷವುಳಿಸಲು ಪ್ರಕಾಶ್‌ಗೆ ಪಟ್ಟ: ದೇವೇಗೌಡ ಕಸರತ್ತು
ಬಿಜೆಪಿಗೆ ಮರಳಲು ಉಮಾಗೆ ಪೇಜಾವರಶ್ರೀ ಸಲಹೆ
ಬೊಕ್ಕಸ ಲೂಟಿ ಮಾಡಿ ಚುನಾವಣೆ ಹೇರಿದ 'ಮಿತ್ರರು' : ಕಾಂಗ್ರೆಸ್
ರಾಜ್ಯ(ಜ)ಕಾರಣ: ಕಾಂಗ್ರೆಸ್ ಬಾಗಿಲು ತಟ್ಟುವ ದಳ ಗುಂಪು
ದೇವೇಗೌಡ - ಕುಮಾರಸ್ವಾಮಿ ಪ್ರತಿಕೃತಿ ದಹನ
ಕುಮಾರಣ್ಣನದು ಪ್ರಾದೇಶಿಕ ಪಕ್ಷವಲ್ಲ : ವೈ.ಎಸ್.ವಿ. ದತ್ತ