"ನಾನು ಮನಸ್ಸು ಮಾಡದೆ ಇದ್ದಿದ್ರೆ ಬಿಜೆಪಿ ಇಷ್ಟು ಹೊತ್ತಿಗೆ ಉಳೀತಾನೇ ಇರಲಿಲ್ಲ. ಮುಖ್ಯಮಂತ್ರಿಯಾಗಲು ಅವರು ನನಗೆ ಅವರ ಪಕ್ಷದ ಬೆಂಬಲ ಕೊಟ್ಟಿರಬಹುದು. ಆದರೆ ಯಡಿಯೂರಪ್ಪ ಡಿಸಿಎಂ ಆಗೋಕ್ಕೆ ನಾನೇ ಕಾರಣ"
ಹೀಗೆಂದವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. "ಕುಮಾರಸ್ವಾಮಿಯನ್ನ ಮುಖ್ಯಮಂತ್ರಿ ಮಾಡಿದ್ದು ಅವರಪ್ಪ ಅಲ್ಲ, ಯಡಿಯೂರಪ್ಪ" ಎಂಬ ಯಡಿಯೂರಪ್ಪನವರ ಹೇಳಿಕೆಯ ಕುರಿತು ಖಾರವಾಗಿ ಪ್ರತಿಕ್ರಿಯಿಸುತ್ತಿದ್ದ ಅವರು, 21 ತಿಂಗಳ ಹಿಂದೆ ಇದೇ ಯಡಿಯೂರಪ್ಪ ಜೆಡಿಎಸ್ ಮನೆ ಬಾಗಿಲಿಗೆ ಬಂದಿದ್ದರು. ಆ ಅನಂತಕುಮಾರ್‌ಗೇ 5 ಕೋಟಿ ರೂಪಾಯಿ ಕೊಡೋದಿದೆ. ಕೊಟ್ಟು ಋಣ ತೀರಿಸಬೇಕಿದೆ. ಈ ಬಿಜೆಪಿ ಸಹವಾಸ ನನಗೆ ಸಾಕಾಗಿದೆ. ಜೆಡಿಎಸ್ ಮಂತ್ರಿಮಂಡಳದಲ್ಲಿ ನನಗೆ ಅವಕಾಶ ಸಾಧ್ಯ ಇಲ್ಲವಾ ಎಂದು ಕೇಳಿದ್ದನ್ನು ಯಡಿಯೂರಪ್ಪ ಸ್ಮರಿಸಿಕೊಳ್ಳಲಿ. ಅದನ್ನು ಬಿಟ್ಟು ಪ್ರತಿಭಟನೆ, ಪ್ರತಿಕೃತಿ ದಹನಗಳಿಂದ ಏನೂ ಪ್ರಯೋಜನವಿಲ್ಲ ಎಂದು ಕುಮಾರಣ್ಣ ಖಾರವಾಗಿ ಪ್ರತಿಕ್ರಿಯಿಸಿದರು.
ವಾಸ್ತವವಾಗಿ ಮೈತ್ರಿ ಸರ್ಕಾರದ ಒಪ್ಪಂದ ಆಗಿದ್ದು ನನ್ನ ಮತ್ತು ಅವರ ನಡುವೆ. ಅದರೆ 21 ತಿಂಗಳ ನಂತರ ನನ್ನ ಅನುಮತಿಯಿಲ್ಲದೆ ದೆಹಲಿಯಿಂದ ಯಶವಂತ ಸಿನ್ಹಾರನ್ನು ಕರೆದುಕೊಂಡು ಬರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಕುಮಾರಣ್ಣ, ಮೊದಲು ತಮ್ಮ ವಿಕೃತ ಮನಸ್ಸಿಗೆ ಯಡಿಯೂರಪ್ಪ ಕಡಿವಾಣ ಹಾಕಿಕೊಳ್ಳಲಿ ಎಂದು ನುಡಿದರು.
|