2007ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಐವರು ಕನ್ನಡ ಸಾಹಿತಿಗಳಿಗೆ ಘೋಷಿಸಲಾಗಿದೆ.
ವಸಂತ ಕುಷ್ಟಗಿ, ಬಿ.ಎಲ್.ವೇಣು, ಕೆ.ವಿ.ನಾರಾಯಣ, ಹೇಮಾ ಪಟ್ಟಣಶೆಟ್ಟಿ ಹಾಗೂ ಮಳ್ಳೂರು ನಾಗರಾಜ ಇವರು ಪ್ರಶಸ್ತಿ ವಿಜೇತರು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ| ಗೀತಾ ನಾಗಭೂಷಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರತಿಭಾವಂತ ಭಾಷಾವಿಜ್ಞಾನಿಯಾಗಿರುವ ಕೆ.ವಿ.ನಾರಾಯಣ ಹೊಸ ತಲೆಮಾರಿನ ಸಾಹಿತ್ಯ ವಿಮರ್ಶಕರಲ್ಲಿ ಅಗ್ರಗಣ್ಯರಾಗಿದ್ದರೆ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿಗೆ ಸೇರಿದ ವಸಂತ ಕುಷ್ಟಗಿಯವರದು ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೈಯಾಡಿಸಿದ ಅನುಭವ ಹೊಂದಿದ್ದಾರೆ. ಚಿತ್ರದುರ್ಗ ಜಿಲ್ಲೆಯವರಾದ ಬಿ.ಎಲ್.ವೇಣು ಕತೆಗಾರರಾಗಿಯೂ ಚಿತ್ರಸಾಹಿತಿಯಾಗಿಯೂ ಹೆಸರು ಮಾಡಿದವರು. ದಲಿತ ಚಳುವಳಿಯಲ್ಲಿ ಹೆಸರುವಾಸಿಯಗಿರುವ ಮಳ್ಳೂರು ನಾಗರಾಜ್ ಹಲವು ಕೃತಿಗಳನ್ನು ರಚಿಸಿದ್ದಾರೆ. ಧಾರವಾಡದ ಹೇಮಾ ಪಟ್ಟಣಶೆಟ್ಟಿ ಕಥೆ, ಕಾವ್ಯ, ನಾಟಕ, ಅನುವಾದಗಳಂತಹ ಹಲವು ಕ್ಷೇತ್ರಗಳಲ್ಲಿ ಸೃಜನಶೀಲತೆಯನ್ನು ಮೆರೆದಿದ್ದಾರೆ.
ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
|