ಯಾವುದೇ ಪಕ್ಷಕ್ಕೆ ಬೆಂಬಲ ನೀಡುವ ಅಥವಾ ತಮ್ಮ ಪಕ್ಷದ ನೇತೃತ್ವದಲ್ಲೇ ಸರ್ಕಾರ ರಚಿಸುವ ಮಾತೇ ಇಲ್ಲ ಎಂದು ಕರ್ನಾಟಕ ಕಾಂಗ್ರೆಸ್ ವ್ಯವಹಾರಗಳು ಉಸ್ತುವಾರಿ ನೋಡಿಕೊಳ್ಳುವ ಕಾಂಗ್ರೆಸ್ ಮುಖಂಡ ಪೃಥ್ವೀರಾಜ್ ಚವಾಣ್ ಹೇಳುವುದರೊಂದಿಗೆ ಹಲವು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ಕೇಂದ್ರ ಸರ್ಕಾರದ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟವಾದಮೇಲೆ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಸಜ್ಜಾಗುತ್ತಿವೆ.
ರಾಜ್ಯದಲ್ಲಿ ರಾಷ್ಟ್ತ್ರಪತಿ ಆಳ್ವಿಕೆ ಘೋಷಣೆಗೆ ಸಂಸತ್ತಿನ ಉಭಯ ಸದನಗಳ ಅನುಮೋದನೆ ಪಡೆಯಲು ಮುಂದಿನ ವಾರದವರೆಗೆ ಕಾಯಲೇಬೇಕಾಗಿದೆ. ಮುಂದಿನ ವಾರದಲ್ಲಿ ಅನುಮೋದನೆ ದೊರೆತು ಅದೇ ಸಂದರ್ಭದಲ್ಲಿ ವಿಧಾನಸಭೆಯ ವಿಸರ್ಜನೆ ಆಗುವ ನೀರೀಕ್ಷೆ ಇದೆ.
ಈಗಾಗಲೇ ಈ ಎಲ್ಲ ವಿದ್ಯಮಾನಗಳ ಬಗ್ಗೆ ಅರಿವಿರುವ ಪಕ್ಷಗಳು ತಮ್ಮ ತಮ್ಮ ದಾರಿ ನೋಡಿಕೊಳ್ಳುವಲ್ಲಿ ನಿರತವಾಗಿವೆ. ವಿಧಾನಸಭೆಯನ್ನು ಅಮಾನತ್ತಿಲ್ಲಿಡದೆ ನೇರವಾಗಿ ವಿಧಾನಸಭೆಯನ್ನು ವಿಸರ್ಜಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿಲ್ಲ.
ಅಮಾನತ್ತಿನಲ್ಲಿರುವುದರಿಂದ ಕಾಂಗ್ರೆಸ್‌ನೊಂದಿಗೆ ಜತೆಗೂಡಿ ಜೆಡಿಎಸ್ ಸರ್ಕಾರ ರಚನೆಗೆ ಮುಂದಾಗಿದೆ ಎಂಬ ಊಹಾಪೋಹಗಳಿಗೆ ರೆಕ್ಕೆಪುಕ್ಕ ಹುಟ್ಟಿಕೊಂಡು ಜನ ಸಾಮಾನ್ಯರಲ್ಲಿ ಮತ್ತಷ್ಟು ಗೊಂದಲ ಮೂಡಿದೆ. ಇನ್ನು ಗೊಂದಲಗಳಾದರೆ, ವದಂತಿಗಳು ಹಬ್ಬಿ ಪರಿಸ್ಥಿತಿ ಇನ್ನೂ ಗಬ್ಬೆದ್ದರೆ ಕಾಂಗ್ರೆಸ್‌ಗೆನೂ ನಷ್ಟವಿಲ್ಲ.
|